ವಿಜಯಪುರ: ಗೃಹ ಸಚಿವ ಜಿ ಪರಮೇಶ್ವರ ಹಾಗೂ ನಟ ಪ್ರಕಾಶ್ ರಾಜ್ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ.
ವಿಜಯಪುರ ನಗರದ ಹೊಸ ಬಿಜೆಪಿ ಕಚೇರಿಯಲ್ಲಿ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು. ನಟ ಪ್ರಕಾಶ ರಾಜ್ ಒಬ್ಬ ಅಯೋಗ್ಯ. ಪ್ರಕಾಶ್ ರಾಜ್ ಅಪ್ಪ-ಅಮ್ಮನಿಗೆ ಹುಟ್ಟಿದ್ದಾನಾ ಅನ್ನೋದಕ್ಕೆ ಗ್ಯಾರಂಟಿ ಏನು? ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಲೇವಡಿ ಮಾಡಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಟ ಪ್ರಕಾಶ ರಾಜ್ ಯಾರಿಗೆ ಹುಟ್ಟಿದ್ದಾನೆ ಎಂದು ತಾಯಿನಾ ಕೇಳಿದ್ದಾನಾ? ತಾಯಿ ಹೇಳಿದಾಗಲೇ ಅಪ್ಪ ಯಾರು ಅಂತ ಗೊತ್ತಾಗಿದೆ ಅಲ್ವಾ ಪ್ರಕಾಶ್ ರಾಜ್ ತಾಯಿಯ ಬಗ್ಗೆ ನನಗೆ ಗೌರವ ಇದೆ ಎಂದರು. ಅಲ್ಲದೇ, ಗೃಹ ಸಚಿವ ಜಿ. ಪರಮೇಶ್ವರ ತಾಕತ್ತು ಇದ್ದರೆ ಮುಸಲ್ಮಾನರ ಹುಟ್ಟಿನ ಬಗ್ಗೆ ಪ್ರಶ್ನಿಸಲಿ. ಮುಸ್ಲಿಂರು ಎಲ್ಲಿ ಹುಟ್ಟಿದ್ರು, ಎಲ್ಲಿಂದ ಬಂದ್ರು ಪ್ರಶ್ನಿಸಲಿ. ಮೈ ಮೇಲೆ ಜ್ಞಾನ ಇಟ್ಟುಕೊಂಡು ಬಾಯಿ ಬಿಡಬೇಕು ಎಂದು ಪರಮೇಶ್ವರ ವಿರುದ್ದ ವಾಗ್ದಾಳಿ ನಡೆಸಿದರು.