ಬೆಂಗಳೂರಿನ ಅರಮನೆಯಲ್ಲಿ ಫೆಬ್ರವರಿ 11to14ರ ಜಾಗತಿಕ ಹೂಡಿಕೆದಾರರ ಸಮಾವೇಶ ಅತ್ಯಂತ ಯಶಸ್ವಿಯಾಗಿದೆ. ಈ ಸಂಬಂಧ ನ್ಯೂಸ್ ಫಸ್ಟ್ ಕನ್ನಡ ವಾಹಿನಿಯು ಇಂದು ಸಂಜೆ 6-30ಕ್ಕೆ ‘ಬೆಸ್ಟ್ ಸ್ಟೇಟ್- ಬೆಸ್ಟ್ ಹೂಡಿಕೆ’ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಲಿದೆ. ವೀಕ್ಷಿಸಿ…
#GIM2025 ರ ಸಮಾರೋಪ ಸಮಾರಂಭದ ನಂತರ ಶುಕ್ರವಾರ ಸಂಜೆ ಉಪ ಮುಖ್ಯ ಮಂತ್ರಿಗಳಾದ DK Shivakumar ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದೆ. ₹10.27 ಲಕ್ಷ ಕೋಟಿ ಹೂಡಿಕೆ, 6ಲಕ್ಷ ಉದ್ಯೋಗ ಖಾತ್ರಿ, ಶೇ. 75ರಷ್ಟು ಬೆಂಗಳೂರಿನ ಆಚೆ ಇರುವ ಪ್ರದೇಶಗಳಿಗೆ, ಶೇ. 45ರಷ್ಟು ಬಂಡವಾಳವು ಉತ್ತರ ಕರ್ನಾಟಕದ ಪ್ರದೇಶಗಳಿಗೆ ಹರಿಯಲಿರುವುದು ಸೇರಿದಂತೆ ಹಲವು ಸಂಗತಿಗಳ ಕುರಿತು ಪ್ರಸ್ತಾಪಿಸಿದರು.
ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವನ್ನು ಸೃಷ್ಟಿಸಲು ನೆರವಾಗುತ್ತಿವೆ. ಇಂತಹ ಸಣ್ಣ ಕೈಗಾರಿಕಾ ಕ್ಷೇತ್ರ ಬಲಪಡಿಸುವುದು ನಮ್ಮಸರಕಾರದ ಆದ್ಯತೆಯೂ ಆಗಿದೆ.ಆರ್ಥಿಕ ಪ್ರಗತಿಗೆ ಅನನ್ಯ ಕೊಡುಗೆ ನೀಡುತ್ತಿರುವ ಉದ್ಯಮಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದರಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಔದ್ಯಮಿಕ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲು ಪ್ರೇರಣೆ ನೀಡಲಿದೆ.

