ಸುಮಾರು ವರ್ಷ ದಿಂದ ಹರಣಶಿಕಾರಿ ಗಲ್ಲಿ ಯಲ್ಲಿ ಅಕ್ರಮವಾಗಿ ಕಳ್ಳ ಬಟ್ಟಿ ದಂದೆ ನಡೀತಾಯಿತ್ತು ಸುಮಾರಿ ಸಾರಿ ಗೋಲಗುಂಬಜ್ ಪೊಲೀಸ್ ರಿಂದ ರೇಡ್ ಮಾಡಿ ವಾರ್ನ್ ಮಾಡಿ ಬಿಟ್ಟಿದ್ದರು. ಅವರಲ್ಲಿ ಪರಿವರ್ತನೆ ಆಗಲಿಲ್ಲ ಮತ್ತೆ ಮನೆಯಲ್ಲೇ ಕಳ್ಳಬಟ್ಟಿ ಸಾರಾಯಿ ಜೊತೆಗೆ ಗಾಂಜಾ ಮಾರಾಟ ಮಾಡಿತ್ತಲೇ ಇದ್ದರು ವಿಷಯ ತಿಳಿದ
ಗೋಲಗುಂಬಜ್ ಪೊಲೀಸರು ವಿಜಯಪುರದ ಹರಣಶಿಖಾರಿ ಕಾಲೊನಿಯಲ್ಲಿ ದಾಳಿ ಮಾಡಿದಾಗ ಅಲ್ಲಿ ಆಕ್ರಮವಾಗಿ ಗಾಂಜಾ ಹಾಗೂ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿರುವುದು ಕಂಡು ಅವರನ್ನ ಕೂಡಲೇ ಬಂಧಿಸಿದರು
ಹರಣಶಿಖಾರಿ ಕಾಲೋನಿಯಲ್ಲಿ ದಾಳಿ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶಂಕರ ಮಾರಿಹಾಳ,ರಾಮನಗೌಡ ಹಟ್ಟಿ ರವರ ಮಾರ್ಗದರ್ಶನದಲ್ಲಿ ಸುನೀಲ ಕಾಂಬಳೆ, ಡಿಎಸ್ಪಿ ಸಿಇಎನ್. ಮಲ್ಲಯ್ಯ ಮಠಪತಿ, ಸಿಪಿಐ ಗೋಲಗುಂಬಜ್, ರಮೇಶ ಆವಜಿ, ಪಿಐ ಸಿಇಎನ್, ಪ್ರದೀಪ ತಳಕೇರಿ, ಪಿಐ ಗಾಂಧಿಚೌಕ ರವರ ನೇತೃತ್ವದಲ್ಲಿ, ಗೋಲಗುಂಬಜ್ ಠಾಣೆಯ ಪಿಎಸ್ಐ ಎಂ.ಡಿ ಫೋರಿ, ಎಚ್.ಡಿ ವಾಲಿಕಾರ, ಆದರ್ಶನಗರ ಠಾಣೆಯ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ ವಿಜಯಪುರ ಜನತೆಗೆ ಸಂತಸ ತಂದಿದ್ದಾರೆ
ಬಲೆಗೆಬಿದ್ದ ಆರೋಪಿಗಳು
1) ಆನಂದ ಮೊಹನ ಚವ್ಹಾಣ, 37 ವರ್ಷ, ಸಾ: ಹರಣತಿಕಾರಿ ಕಾಲೋನಿ, ವಿಜಯಪುರ
2 ) ರಿಯಾಜ ಅಬ್ದುಲ್ ನರಸಣಗಿ, 23 ವರ್ಷ, ಸಾ: ಚಪ್ಪರಬಂದ ಓಣಿ, ರಿಮ್ಯಾಂಡ ಹೊಮ್ ಹತ್ತಿರ, ವಿಜಯಪುರ
ಇವರನ್ನು ವಶಕ್ಕೆ ಪಡೆದು ಅವರಿಂದ ಸುಮಾರು 60.000/- ಮೌಲ್ಯದ 600 ಗ್ರಾಂ, ದಷ್ಟು ಗಾಂಜಾವನ್ನು ವಶಪಡಿಸಿಕೊಂಡಿರುತ್ತಾರೆ.
ಅಲ್ಲದೇ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ;
3) ವಾಸು ರಾಜು ಚವ್ಹಾಣ, 25 ವರ್ಷ, ಸಾ: ಹರಣಶಿಕಾರಿ ಕಾಲನಿ, ವಿಜಯಪುರ ಈತನಿಂದ ಸುಮಾರು 110 ಲೀಟರ್ ಕಳ್ಳಭಟ್ಟಿ ಸರಾಯಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಹಾಗೂ ಅಬಕಾರಿ ಕಾಯ್ದೆ ಅಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
ಲಕ್ಷ್ಮಣ ನಿಂಬರಗಿ, ಐಪಿಎಸ್
ಪೊಲೀಸ್ ಅಧೀಕ್ಷಕರು. ವಿಜಯಪುರ ಜಿಲ್ಲೆ.

