ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಗುಂಪು ಬಂಧನ
ತಮ್ಮ ಸ್ವಂತ ಲಾಭಕ್ಕಾಗಿ ಮಾದಕ ವಸ್ತುವಾದ ಗಾಂಜಾ ಅನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ತಮ್ಮ 1) ಎರ್ಟಿಗಾ ಕಾರ್ ನಂ: ಟಿ.ಎಸ್-02 ಇ.ಎಚ್-4408 ಹಾಗೂ 2) ಸ್ವಿಪ್ಟ್ ಡಿಜೈರ್ ಕಾರ ನಂ: ಎಂ.ಎಚ್-02 ಸಿ.ಆರ್-7960 ನೇದ್ದವುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿದ್ದನ್ನು ದಾಳಿ ಮಾಡಿ ಪ್ರಕರಣ ದಾಖಲಿಸಲಾಗಿದೆ
ದಿನಾಂಕ 21.11.2024 ರಂದು ಮಧ್ಯಾಹ್ನದ ವೇಳೆ ಸುನೀಲ್.ಆರ್.ಕಾಂಬಳೆ, ಡಿಎಸ್ಪಿ, ರಮೇಶ ಸಿ ಅವಜಿ, ಪಿಐ ಹಾಗೂ ಸಿಬ್ಬಂದಿ ಜನರು ಸಿಇಎನ್ ಕ್ರೈಂ ಪೊಲೀಸ್ ಠಾಣೆ ವಿಜಯಪುರ ಇವರು ಖಚಿತ ಮಾಹಿತಿ ಮೇರೆಗೆ, ಮಾನ್ಯ ಪೊಲೀಸ್ ಅಧೀಕ್ಷಕರು, ವಿಜಯಪುರ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ವಿಜಯಪುರ, ರವರ ಮಾರ್ಗದರ್ಶನದಂತೆ ವಿಜಯಪುರ ಜಿಲ್ಲೆಯ ಸಿಂದಗಿ ಕ್ರಾಸ್ ದಿಂದ ಬುರಣಾಪೂರ ಗ್ರಾಮಕ್ಕೆ ಹೋಗುವ ರಸ್ತೆಯ ಮೇಲೆ ಆರೋಪಿತರಾದ
1) ಸಂತೋಷ ನಾಗಶೆಟ್ಟಿ ರಾಠೋಡ, 35 ವರ್ಷ, ಜಾತಿ-ಹಿಂದೂ ಲಂಬಾಣಿ, ಉದ್ಯೋಗ-ಕಾರ್ ಚಾಲಕ ಸಾ। ಚಿಲ್ಲೆಪಲ್ಲಿ ತಾಂಡಾ, ಝರಸಂಗಮ ಮಂಡಲ್, ತಾ| ಜಹಿರಾಬಾದ ಜಿ! ಸಂಗಾರೆಡ್ಡಿ ಜಿಲ್ಲೆ, ತೆಲಂಗಾಣ -502251.
2) ಸಂಜು @ ಸಂಜೀವ ಕಿಶನ್ ಆಡೆ @ ರಾಠೋಡ, 33 ವರ್ಷ, ಜಾತಿ-ಹಿಂದೂ ಲಂಬಾಣಿ, ಉದ್ಯೋಗ-ಕಾರ್ ಚಾಲಕ ಸಾ। ರುಮ್ಮನಗುಡ ತಾಂಡಾ ತಾ। ಕಾಳಗಿ ಜಿ। ಕಲಬುರಗಿ, ಹಾಲಿ-ಮಹಾರಾಷ್ಟ್ರ ನಗರ, ಬಾಂದ್ರಾ ಈಸ್ಟ್, ಮುಂಬಯಿ, ಮಹಾರಾಷ್ಟ್ರ-400051.
3) ಸಂತೋಷ ಧನಸಿಂಗ ರಾಠೋಡ, 38 ವರ್ಷ, ಜಾತಿ-ಹಿಂದೂ ಲಂಬಾಣಿ ಉದ್ಯೋಗ- ಸೂಪರವೈಜರ್, ಸಾ| ರಮ್ಮನಗುಡ ತಾಂಡಾ ತಾ। ಕಾಳಗಿ ಜಿ। ಕಲಬುರಗಿ, ಹಾಲಿವಸ್ತಿ-ಗೊರೆಗಾಂವ ಈಸ್ಟ್, ಹಮ್ಮುಲಾಲ ಸೇವಾ ಮಂಡಲ, ಬಂಜಾರಾ ಪಾಡಾ, ಮುಂಬಯಿ, ಮಹಾರಾಷ್ಟ್ರ-400063.
ಇವರಿಂದ ಜಬ್ಟಾದ ಮಾಲು
1) ಸುಮಾರು 46 ಕೆ.ಜಿ 676ಗ್ರಾಂ ಗಾಂಜಾ, ಅದರ ಅಂದಾಜು ಕಿಮ್ಮತ್ತು 22,00,000/-ರೂ.
2) ಎರ್ಟಿಗಾ ಕಾರ್ ನಂ: ಟಿ.ಎಸ್-02 ಇ.ಎಚ್-4408 ನೇದ್ದು ಅದರ ಅಂದಾಜ ಕಿಮ್ಮತ್ತ 5 ಲಕ್ಷ ರೂ.
3) ಸ್ವಿಪ್ಟ್ ಡಿಜೈರ್ ಕಾರ ನಂ: ಎಂ.ಎಚ್-02 ಸಿ.ಆರ್.-7960 ನೇದ್ದು ಅದರ ಅಂದಾಜ ಕಿಮ್ಮತ್ತ 3 ಲಕ್ಷ ರೂ.
ಈ ಪ್ರಕಾರ ಒಟ್ಟು 30,00,000/-ರೂ. ಕಿಮ್ಮತ್ತಿನ ಮಾಲನ್ನು ಜಪ್ತ ಮಾಡಿದ್ದು ಇರುತ್ತದೆ.
ಈ ಬಗ್ಗೆ ಆರೋಪಿತರ ಮೇಲೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಗುನ್ನಾ ನಂ: 59/2024 ಕಲಂ: 8(c), 20(b)(ii)(C) ಎನ್.ಡಿ.ಪಿ.ಎಸ್. ಕಾಯ್ದೆ-1985 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.