ಮಕ್ಕಳ ಕೈ ಗೆ ಮೊಬೈಲ್ ಕೊಟ್ಟು 14 ಲಕ್ಷ ಕಳೆದುಕೊಂಡ
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ನಿವೃತ್ತ ನೌಕರ ಬಸವರಾಜ ಹವಾಲ್ದಾರ್ ಅವರು ತಮ್ಮ ಆಟವಾಡಲೆಂದು ಮೊಮ್ಮಕ್ಕಳಿಗೆ ಮೊಬೈಲ್ ನೀಡಿದ್ದರು ಆದರೆ ಆದೇಶಯದಲ್ಲಿ ಕಾದುಕುಳಿತ ಸೈಬರ್ ವಂಚಕರು ಮೊಬೈಲ್ ಎಪಿಕೆ ಫೈಲ್ ಮೂಲಕ ಡೌನ್ಲೋಡ್ ಆದ ಅಪ್ಲಿಕೇಶನ್ ಮೂಲಕ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. 14 ಲಕ್ಷ ರೂಪಾಯಿಗಳನ್ನು ಕದ್ದಿದ್ದಾರೆ. ವಿಷಯ ತಿಳಿತಿದ್ದಂತೆ ಬಸವರಾಜ ಹವಾಲ್ದಾರ್ ಮತ್ತು ಅವರ ಪತ್ನಿಯ ಜಂಟಿ ಖಾತೆಯಲ್ಲಿದ್ದ 14 ಲಕ್ಷ ರೂ. ವಂಚಕರು ದೋಚಿದ್ದಾರೆ ಎಂದು ಇಂದು ಸಿಂದಗಿಯಲ್ಲಿ ಮಾದ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು ತಮಗಾದ ವಂಚನೆ ಕುರಿತು ಮಾಹಿತಿ ನೀಡಿದರು.