ವಿಜಯಪುರ :ದಿನೇ ದಿನೇ ಅಫಘಾತ ಪ್ರಕರಣಗಳು ಹೆಚ್ಚುತ್ತಿವೆ, ಅದರಲ್ಲೂ ದ್ವಿಚಕ್ರ ವಾಹನ ಸವಾರರ ಅಪಘಾತವು ಜಾಸ್ತಿ. ಈ ನಿಟ್ಟಿನಲ್ಲಿ ಅಫಘಾತ ಪ್ರಮಾಣವನ್ನು ಕಡಿಮೆ ಮಾಡಲು, ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯ ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ ಮಾಡುವ ಮೂಲಕ ಹೆಲ್ಮೆಟ್ ಕಡ್ಡಾಯ ಎಂದು ಹೇಳಿ ಜಾಗೃತಿ ಅಭಿಯಾನವನ್ನು ಕೈಗೊಂಡರು.
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶಿಕೇಶ್ ಸೋನಾವಣೆ ರವರ ಮಾರ್ಗದರ್ಶನದಲ್ಲಿ, DYSP G S ತಲಕಟ್ಟಿ, ಇನ್ಸ್ಪೆಕ್ಟರ್ ರಾಯಗೊಂಡ ಜಾನರ್, ಹಾಗೂ PSI ವಿನೋದ್ ಪೂಜಾರಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಾಷಾ, ಬಾವೂರ್, ಬಾಗವಾನ, ಹಾಗೂ ಇನ್ನಿತರರು ಸೇರಿ ಈ ಜಾಗೃತಿ ಅಭಿಯಾನವನ್ನು ಆಯೋಜಿಸಿದ್ದರು.