Health Tips : ಗೋಡಂಬಿ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಆದರೆ ಇದನ್ನು ಮಿತವಾಗಿ ಬಳಸಬೇಕು. ಇಲ್ಲವಾದರೆ ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದರೆ ಗೋಡಂಬಿಯನ್ನು ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆಯೇ? ಎಂಬುದನ್ನು ತಿಳಿಯಿರಿ.
ಗೋಡಂಬಿಯಲ್ಲಿ ಆರೋಗ್ಯಕರ ಕೊಬ್ಬು, ಫೈಬರ್, ಮೆಗ್ನೀಶಿಯಂ, ಪ್ರೋಟೀನ್, ಜೀಔಸತ್ವಗಳು, ಖನಿಜಗಳು ಸೇರಿದಂತೆ ಹಲವು ಪೋಷಕಾಂಶಗಳಿವೆ.
ಇದನ್ನು ಸೇವಿಸಿದರೆ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.
ಆದರೆ ಇದರಲ್ಲಿ ಕ್ಯಾಲೋರಿ ಹೆಚ್ಚಾಗಿದ್ದರೂ ಕೂಡ ಇದು ನಿಮ್ಮ ಹೊಟ್ಟೆಯನ್ನು ದೀರ್ಘಕಾಲ ತುಂಬಿರುವಂತೆ ಮಾಡುತ್ತದೆ. ಹಾಗಾಗಿ ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಹಾಗಾಗಿ ಇದನ್ನು ಸೇವಿಸಿದರೆ ನಿಮ್ಮ ತೂಕ ನಿಯಂತ್ರಣದಲ್ಲಿರುತ್ತದೆ.