ಹಾಸನ :ಸರ್ಕಾರಿ ಕಛೇರಿಗಳಲ್ಲಿ ಲಂಚ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ. ಗುಮಾಸ್ತನಿಂದ ಹಿಡಿದು ಮೇಲಾಧಿಕಾರಿವರೆಗೆ ಎಲ್ಲರೂ ಲಂಚ ತೆಗೆದುಕೊಂಡು ಭ್ರಷ್ಟರಾಗುತ್ತಿದ್ದಾರೆ. ಜನರಿಗೆ ದುಡ್ಡು ಕೊಡದೆ ಕೆಲಸವಾಗುವುದಿಲ್ಲ ಎಂಬ ಭಾವನೆ ಬೇರೂರಿದೆ. ಆದರೆ ಹಾಸನದಲ್ಲೊಬ್ಬ ಅಧಿಕಾರಿ ತಮ್ಮ ಮೇಜಿನ ಮೇಲೆ “ನಾನು ಭ್ರಷ್ಟನಲ್ಲ,ಇಲ್ಲಿ ಲಂಚ ಸ್ವೀಕರಿಸುವುದಿಲ್ಲ” ಎಂಬ ಫಲಕ ಹಾಕಿಕೊಂಡು ಪ್ರಾಮಾಣಿಕತೆ ಮೆರೆದಿದ್ದಾರೆ.ಆ ಮುಖಾಂತರ ಪ್ರಾಮಾಣಿಕತೆ ಇನ್ನೂ ಇದೆ ಎಂದು ತೋರಿಸಿದ್ದಾರೆ.
ಹಾಸನದ ಬಿಇಒ ಕಛೇರಿಯ ಅಧೀಕ್ಷಕ ಡಿಎಸ್ ಲೋಕೇಶ್ ಅವರು ತಮ್ಮ ಮೇಜಿನ ಮೇಲೆ ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿಕೊಳ್ಳುವ ಮೂಲಕ ಪ್ರಾಮಾಣಿಕತೆ ಮೆರೆಯುತ್ತಿದ್ದಾರೆ.ಈ ಹಿಂದೆ ಅವರು ಮಾಜಿ ಪ್ರಧಾನಿಯವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿ ಜನಮೆಚ್ಚುಗೆ ಗಳಿಸಿದ್ದರು.ಈಗ ಬಿಇಒ ಆಗಿ ಭಡ್ತಿ ಪಡೆದು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ.