ವಿಜಯಪುರ: ಹುಟ್ಟುತ್ತಲೆ ನಾನು ಕಾಂಗ್ರೆಸ್ ವಿರೋಧಿಯಾಗಿ ಬೆಳೆದಿದ್ದೇನೆ ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು, ಕಾಂಗ್ರೆಸ್ ವಿರೋಧಿಯಾಗಿ ರಾಜಕಾರಣ ಮಾಡಿದ್ದೇನೆ. 45 ವರ್ಷದವರೆಗೂ ರಾಜಕಾರಣ ಮಾಡಿದ್ದೇನೆ. ಇನ್ನೇನು ವಯಸ್ಸಾಗಿದೆ, ಮತ್ತೆ ಪಾರ್ಟಿ ಚೇಂಜ್ ಮಾಡಿ ರಾಜಕಾರಣ ಏನು ಮಾಡೋದಿದೆ ಎಂದರು.
ನಾನಂತೂ ಕಾಂಗ್ರೆಸ್ಗೆ ಹೋಗಲ್ಲ. ಪಕ್ಷಾಂತರಕ್ಕೆ ವಯಸ್ಸಾಗಿದೆ. ಆದ್ರೇ, ವಯಸ್ಸು ಯಾರಿಗೆ ಆಗಿದೆ ಅಂತಾ ಜಿಗಜಿಣಗಿ ನಸುನಕ್ಕರು. ಕೆಲವೊಬ್ಬರು ಸಂಸದರಿಗೆ ಸ್ಪರ್ಧಿಸಬೇಕು ಇಚ್ಛೆ ಇದೆ. ಇನ್ನು ಕೆಲವೊಬ್ಬರಿಗೆ ಸ್ಪರ್ಧಿಸಬಾರದು ಸಾಕು ಅನ್ನುವ ಇಚ್ಛೆ ಇದೆ. ನಾನೇನು ಯಾವತ್ತೂ ಸ್ಪರ್ಧಿಸಲ್ಲ ಎಂದಿಲ್ಲ. ಪಕ್ಷದವರು ಟಿಕೆಟ್ ಕೊಟ್ಟರೆ ಸ್ಪರ್ಧಿಸ್ತೀನಿ. ಇಲ್ಲಾಂದ್ರೆ ಮನೆಯಲ್ಲಿರ್ತಿನಿ, ಸಿದ್ದೇಶ್ವರ ದೇಗುಲದಲ್ಲಿ ಕಾಯಿ ಒಡೆದು ಬಿಡುತ್ತೇನೆ ಎಂದರು.