ವಿಜಯಪುರ: ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ನಾನು ಸ್ವಾಗತಿಸುತ್ತೇನೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತಾನಾಡಿದ ಅವರು, ಹಿಂದೆ ನಾನು ಜೆಡಿಎಸ್ ಪಕ್ಷದಲ್ಲಿದೆ. ಬಳಿಕ ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದೇನೆ. ಎಚ್ ಡಿ ಕುಮಾರಸ್ವಾಮಿ ನನ್ನ ಮೇಲೆ ಮಗನಿಗಿಂತ ಹೆಚ್ಚು ವಿಶ್ವಾಸ ಇಟ್ಟಿದ್ದರು. ದೇವೆಗೌಡರ ಬಗ್ಗೆಯೂ ನನಗೆ ಗೌರವವಿದೆ.
ಆದ್ರೆ ಅಂದು ಆಡಿಯೋ ಸಿಡಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದರು ಎಂದರು. ಇನ್ನೂ ನಾನು ಹೆಚ್ಡಿಕೆ ಕುಟುಂಬದ ಜೊತೆಗೆ ಉತ್ತಮ ಸಂಬಂಧದಲ್ಲಿದ್ದೀನಿ ಎಂದರು.