ಚೆನ್ನೈ: “ಅನುಮಾನವೇ ಬೇಡ. ಈ ಸಲ ವಿಶ್ವಕಪ್ ನಮ್ದೇ ‘ ಎಂಬುದಾಗಿ “ತಲೈವಾ’ ಭವಿಷ್ಯವಾಣಿ ನುಡಿದಿದೆ. ಭಾರತವೇ ಚಾಂಪಿಯನ್ ಆಗುತ್ತದೆ ಎಂದು ಸೂಪರ್ಸ್ಟಾರ್ ರಜನೀಕಾಂತ್ ಭರಪೂರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಜನೀಕಾಂತ್ ಪತ್ನಿ ಲತಾ ಜತೆ ನ್ಯೂಜಿಲ್ಯಾಂಡ್ ಎದುರಿನ ಸೆಮಿಫೈನಲ್ ಪಂದ್ಯವನ್ನು ವಾಂಖೇಡೆಯಲ್ಲಿ ಕುಳಿತು ವೀಕ್ಷಿಸಿದ್ದರು. ಅನಂತರ ಚೆನ್ನೈಗೆ ಆಗಮಿಸಿ ಪಂದ್ಯದ ಅನುಭವವನ್ನು ಹಂಚಿಕೊಂಡಿದ್ದರು.
“ಆರಂಭದಲ್ಲಿ ನಾನು ನರ್ವಸ್ ಆಗಿದ್ದೆ. ಸುಮಾರು ಒಂದೂವರೆ ಗಂಟೆ ಕಾಲ ಗರಬಡಿದವನಂತೆ ಕುಳಿತಿದ್ದೆ. ನ್ಯೂಜಿಲ್ಯಾಂಡ್ ವಿಕೆಟ್ ಉರುಳುತ್ತಿರುವಂತೆಯೇ ಸಮಾಧಾನಗೊಂಡೆ. ನನಗೀಗ ಸಂಪೂರ್ಣ ಸಮಾಧಾನವಾ ಗಿದೆ. ಭಾರತ ಈ ಸಲ ಖಂಡಿತ ಚಾಂಪಿಯನ್ ಆಗಲಿದೆ. ಇದು ನೂರಕ್ಕೆ ನೂರರಷ್ಟು ಖಚಿತ. ನಮ್ಮ ತಂಡ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದೆ’ ಎಂದು ರಜನೀಕಾಂತ್ ಹೇಳಿದರು.