ದರ್ಗಾದಲ್ಲಿ ಹಿಂದೂ ದೇವರ ಆಕೃತಿ ಕೆತ್ತನೆ ಅದು ಅನುಭವ ಮಂಟಪವಿತ್ತು ಶಾಸಕ ಯತ್ನಾಳ
ಕೇಂದ್ರ ಸಚಿವರಿಗೆ ಪತ್ರ ರವಾನಿಸಿದ ಶಾಸಕ ಯತ್ನಾಳ
ವಿಜಯಪುರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಪೀರ್ ಬಾಷಾ ದರ್ಗಾ ಮೊದಲು ಬಸವಣ್ಣನವರ ಮೂಲ ಅನುಭವ ಮಂಟಪವಿತ್ತು ಎಂದು ಅನೇಕ ಸ್ವಾಮೀಜಿಗಳು, ಇತಿಹಾಸತಜ್ಞರು ಸ್ಥಳೀಯರು ಹೇಳಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ದರ್ಗಾದಲ್ಲಿ ಹಿಂದೂ ದೇವರ ಕೆತ್ತನೆ, ಹಿಂದೂ ಶೈಲಿ ಕಲ್ಯಾಣಿ ಹಾಗೂ ಹಿಂದೂ ದೇವರ ಕುರುಹುಗಳು ಇದೆ ಎಂದು ಗೊತ್ತಾಗಿದೆ. ಸರ್ವೇ ನಡೆಸಿ ಈ ಜಾಗವನ್ನು ಭಾರತೀಯ ಪುರಾತತ್ವ ಇಲಾಖೆಗೆ ನೀಡಬೇಕೆಂದು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.