ಸರ್ಕಾರದಿಂದ ಬಡವರಿಗಾಗಿ ನೀಡುತ್ತಿರುವ ಅಕ್ಕಿ ಯನ್ನು ಖದೀಮರು ಕಾಳ ಸಂತೇಯಲ್ಲಿ ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ಸಾಗಿಸುತ್ತಿರುವುದು ಇಂಡಿ ತಾಲೂಕಿನ ಆಹಾರ ನಿರೀಕ್ಷಕ ಪರಮಾನಂದ ಹೂಗಾರ್ ಹಾಗೂ ಪಟ್ಟಣ ಪೊಲೀಸ್ ನಿರೀಕ್ಷಕ ( CPI) ಪ್ರದೀಪ ಭೀಸೆ ಇವರ ನೇತೃತ್ವದಲ್ಲಿ ಮೂಟೆಗಟ್ಟಲೆ ಅಕ್ಕಿಯನ್ನು ವಾಹನದಲ್ಲಿಟ್ಟು ಸಾಗಿಸುತ್ತಿರುವ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಚರಣೆಯಲ್ಲಿ ಒಟ್ಟು 1110 ಕೆಜಿ ಸುಮಾರು 32,000 ರೂ ಮೌಲ್ಯದ ಅಕ್ಕಿ ಹಾಗೂ ಐದು ಲಕ್ಷ ಮೌಲ್ಯದ ವಾಹನ ಸಮೇತ ಜಪ್ತಿ ಮಾಡಿ ಬಂಧಿಸಿದ್ದಾರೆ. ಗುರುವಾರ ರಾತ್ರಿ ಪಟ್ಟಣದ ಇಂಡಿ ರೈಲು ನಿಲ್ದಾಣ ಹತ್ತಿರ ಪ್ಲಾಸ್ಟಿಕ್ ಚೀಲದಲ್ಲಿ ನೆರೆರಾಜ ಮಹಾರಾಷ್ಟ್ರಕ್ಕೆ ಅಕ್ಕಿ ಸಾಗಾಣಿಕೆ ಮಾಡುತ್ತಿರುವ ಇಂಡಿ ಪಟ್ಟಣದ ವಕಾಸ್ ಅಲಿಂ ಶೇಕ್ ಹಾಗೂ ಸೋಹೈಲ್ ಕಲ್ಬುರ್ಗಿ ಎಂಬ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿ ಸಿದ್ದಾರೆ.
ಈ ನಿಷ್ಟಾವಂತ ಅಧಿಕಾರಿಯ ಕಾರ್ಯ ಜನ ಮೆಚ್ಚಿಗೆಯ ಕಾರಣವಾಗಿದೆ ಇಂಡಿ ಪಟ್ಟಣದ ಜನರ ಮುಖದಲ್ಲಿ ಮಂದಹಾಸ ಮೂಡಿದೆ

