ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ.
77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳ ಕಚೇರಿ ಯಲ್ಲಿ ಎಸ್ಪಿ ಎಚ್ ಡಿ ಆನಂದಕುಮಾರ ಧ್ವಜಾರೋಹಣವನ್ನು ನೆರವೇರಿಸಿದರು.
ವಿಜಯಪುರ ನಗರದ ಜಿಲ್ಲಾ ಪೊಲೀಸ ವರಿಷ್ಠಾಧಿಕರಿಗಳ ಕಚೇರಿಯ ಆವರಣದಲ್ಲಿ ಎಸ್ಪಿ ಆನಂದಕುಮಾರ ಧ್ವಜಾರೋಹಣ ಮಾಡಿದರು.
ಅಲ್ಲದೇ, ಈ ವೇಳೆ ಜಿಲ್ಲಾ ಪೊಲೀಸ ಹಿರಿಯ, ಕಿರಿಯ ಪೊಲೀಸರು ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎ ಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಸವರಾಜ್ ಎಲಿಗಾರ್, ಸಿಪಿಐ ಎನ್ ಎಸ್ ಜನಗೌಡ, ಸೇರಿದಂತೆ ಸಿಬ್ಬಂದಿಗಳು ಹಾಗೂ ಪರಿವಾರದವರು ಉಪಸ್ಥಿತರಿದ್ದರು…
ವರದಿ : ಹಿದಾಯತ್ ಮುಲ್ಲಾ