ವಿಜಯಪುರದಲ್ಲಿ ಸ್ವಾತಂತ್ರೋತ್ಸವ ದಿನಾಚರಣೆಯ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ನಗರದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ ಪಾಟೀಲ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ವಿವಿಧ ತಂಡಗಳ ಪಥ ಸಂಚಲನ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿ, ಸ್ವಾತಂತ್ರೋತ್ಸವದ ಸಂದೇಶ ನೀಡಿದರು.
ಪಥ ಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ,ಐಆರ್ ಬಿ ಪೊಲೀಸ್ ಪಡೆ, ನಾಗರಿಕ ಪೊಲೀಸ್ ಪಡೆ,ಗೃಹ ರಕ್ಷಕ ದಳ,ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಸೈನಿಕ ಶಾಲೆ, ಕವಲಗಿಯ ಬಾಲಕರ ಸಂಗನ ಬಸವ ಅಂತರಾಷ್ಟ್ರೀಯ ಶಾಲೆ, ಸರ್ಕಾರಿ ಕೃಷಿ ಆಧಾರಿತ ಬಾಲ ಮಂದಿರ ಹಿರಿಯ, ಶಾಂತಿನಿಕೇತನ ಸಿಬಿಎಸ್ಇ ಬಾಲಕೀಯರ ಇಂಟರ್ ನ್ಯಾಶನಲ್ ಶಾಲೆ,ಮಹಾತ್ಮಾ ಗಾಂಧಿ ಪ್ರೌಢ ಶಾಲೆ,ಕೆ.ಜಿಎಂ.ಪಿಎಸ್, ರಮಾಬಾಯಿಅಂಬೇಡ್ಕರ್ ಗೈಡ್ಸ್ ತಂಡ, ತೊರವಿ, ಎಚ್.ಪಿಎಸ್ ಶಾಂತಿನಗರ ತೊರವಿ, ರಂಭಾಪೂರ ಕೆಬಿಎಸ್ ನಂ.50,ಕೆಜಿಎಚ್ ಪಿ ಎಸ್-12 ದರ್ಗಾ ಶಾಲೆ,ಜಗಜ್ಯೋತಿ ಬಸವೇಶ್ವರ ಪ್ರೌಢ ಶಾಲೆ ರಂಭಾಪುರ, ಸೇಂಟ್ ಜೋಶೆಫ್ ಶಾಲೆ, ಬಾಲಕೀಯರ ಸಂಗನಬಸವ ಅಂತಾರಾಷ್ಟ್ರೀಯ ಶಾಲೆ,ಕವಲಗಿ ಬಾಲಕರ ಶಾಂತಿನಿಕೇತನ ಸಿಬಿಎಸ್ ಇ ಇಂಟರ್ ನ್ಯಾಶನಲ್ ಶಾಲೆ, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸ್ಕೌಟ್ಸ್ ಹಾಗೂ ಗೈಡ್ಸ್, ಶ್ರೀಮತಿ ವಿಜಯಲಕ್ಷ್ಮ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ ವಿಕಲ ಚೇತನ ಮಕ್ಕಳ ಪುನಶ್ಚೇತನ ಕೇಂದ್ರ ಹಾಗೂ ಪೊಲೀಸ್ ವಾದ್ಯ ವೃಂದ ಭಾಗವಸಿಹಿದ್ದವು