ಉತ್ತರಾಖಂಡ : ಟೀಂ ಇಂಡಿಯಾ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ, ಕಾರು ಅಪಘಾತಕ್ಕೊಳಗಾದ ವ್ಯಕ್ತಿಯೊಬ್ಬನನ್ನು ರಕ್ಷಿಸಿ ಗಮನ ಸೆಳೆದಿದ್ದಾರೆ. ನೈನಿತಾಲ್ನಲ್ಲಿ ನಡೆದ ಈ ಅವಘಡದಲ್ಲಿ ಶಮಿ, ಸಂತ್ರಸ್ಥರಿಗೆ ನೆರವಾಗಿದ್ದಾರೆ. ಈ ಕುರಿತಂತೆ ಶಮಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ಕುರಿತಂತೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಶಮಿ, “ಅವರು ತುಂಬಾ ಅದೃಷ್ಟವಂತರು, ಯಾಕೆಂದರೆ ದೇವರು ಅವರಿಗೆ ಎರಡನೇ ಜೀವನ ಕೊಟ್ಟಿದ್ದಾನೆ. ನನ್ನ ಕಾರಿನ ಮುಂದೆ ಅವರ ಕಾರು ನೈನಿತಾಲ್ ರಸ್ತೆಯ ಪರ್ವತದ ಬಳಿ ಅಪಘಾತಕ್ಕೊಳಗಾಯಿತು. ನಾನು ಅವರನ್ನು ಸುರಕ್ಷಿತವಾಗಿ ಕಾಪಾಡಿದೆ ಎಂದು ಬರೆದುಕೊಂಡಿದ್ದಾರೆ.