ಕರ್ನಾಟಕದ ಹಲವು ಹತ್ತು ಒಳ್ಳೆ ವಿಚಾರಕ್ಕೆ ನಂಬರ್ 1 ಎನಿಸಿಕೊಂಡಿದೆ. ಆದರೆ ಮೊಬೈಲ್ ಕಳ್ಳತನದಲ್ಲೂ ಮೊದಲ ಸ್ಥಾನದಲ್ಲಿರುವುದು ಬೇಸರದ ಸಂಗತಿ. ದೇಶಾದ್ಯಂತ ಮೊಬೈಲ್ ಕಳ್ಳತನ ಹೆಚ್ಚಾಗಿದೆ. ಅದರಲ್ಲೂ ಮೊಬೈಲ್ ಕಳ್ಳತನ ಪ್ರಕರಣಗಳಲ್ಲಿ ಕರ್ನಾಟಕವೇ ನಂಬರ್ 1 ಎಂಬ ಆಘಾತಕಾರಿ ವಿಷಯ ಬಹಿರಂಗವಾಗಿದೆ.
ಈ ಬಗ್ಗೆ ಕೇಂದ್ರದ ಸಿಟಿಜನ್ ಸೆಂಟ್ರಿಕ್ ಪೋರ್ಟಲ್ ಡಿಪಾರ್ಟ್ಮೆಂಟ್ ಆಫ್ ಟೆಲಿ ಕಮ್ಯೂನಿಕೇಷನ್ ವರದಿ ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ ಅತಿ ಹೆಚ್ಚು ಮೊಬೈಲ್ ಕಳ್ಳತನ ಆಗಿರುವ ಬಗ್ಗೆ ಉಲ್ಲೇಖ ಮಾಡಿದೆ.
ಕಳೆದ ಒಂದು ತಿಂಗಳಲ್ಲಿ ಯಾವ ರಾಜ್ಯದಲ್ಲಿ ಹೆಚ್ಚು ಮೊಬೈಲ್ ಕಳ್ಳತನ ಕೇಸ್ಗಳು ದಾಖಲಾಗಿದೆ. ಹೆಚ್ಚು ಮೊಬೈಲ್ ಕಳ್ಳತನವಾದ ರಾಜ್ಯಗಳೆಂದರೇ, ಕರ್ನಾಟಕ – 1,13,811., ಮಹಾರಾಷ್ಟ್ರ -1,09,704., ಹರಿಯಾಣ – 7,107., ಕೇರಳ – 5,513., ಮಧ್ಯಪ್ರದೇಶ – 4,410., ಕೊಲ್ಕತ್ತಾ – 2,858., ಜಾರ್ಖಂಡ್ – 2,277., ಹಿಮಾಚಲ ಪ್ರದೇಶ – 1,291., ಜಮ್ಮು ಮತ್ತು ಕಾಶ್ಮೀರ – 1,160 ಹಾಗು ಮೇಘಾಲಯ – 538. ಇದು ಸಿಟಿಜನ್ ಸೆಂಟ್ರಿಕ್ ಪೋರ್ಟಲ್ ಡಿಪಾರ್ಟ್ಮೆಂಟ್ ಆಫ್ ಟೆಲಿ ಕಮ್ಯೂನಿಕೇಷನ್ ಬಿಡುಗಡೆ ಮಾಡಿರುವ ಮಾಸಿಕ ವರದಿ. ಒಂದು ತಿಂಗಳಲ್ಲಿ ಒಂದು ಲಕ್ಷದ ಹದಿಮೂರು ಸಾವಿರದ ಎಂಟುನೂರ ಹನ್ನೊಂದು ಮೊಬೈಲ್ ಕಳವು ಆಗಿದೆ. ಕಳೆದ ತಿಂಗಳು 18 ಸಾವಿರಕ್ಕೂ ಹೆಚ್ಚು ಮೊಬೈಲ್ ಕಳವು ಆಗಿರುವುದಕ್ಕೆ ಶಕ್ತಿ ಯೋಜನೆಯೂ ಒಂದು ಕಾರಣ ಎಂದು ಹೇಳಲಾಗುತ್ತಿದೆ.