ಕೆಜಿಎಫ್ ಚಾಚಾ ಎಂದೇ ಹೆಗ್ಗಳಿಕೆ ಪಡೆದ ಸ್ಯಾಂಡಲ್ವುಡ್ ಖಳ ನಟ ಹರೀಶ್ ರಾಯ್ಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿದೆ ಈಗ ನಟ ಹರೀಶ್ ರಾಯ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಕ್ಯಾನ್ಸರ್ ಸಹ ಕಾಡುತ್ತಿದ್ದು, ಸದ್ಯ ಚಿಕಿತ್ಸೆಯ ಮೂಲಕ ಚೇತರಿಸಿಕೊಳ್ಳುತ್ತಿದ್ದಾರೆ. ನಾಲ್ಕು ದಿನದ ಹಿಂದೆ ಉಸಿರಾಟದ ತೊಂದರೆಯಿಂದ ಹರೀಶ್ ರಾಯ್ ಆಸ್ಪತ್ರೆಗೆ ದಾಖಲಾಗಿದ್ದರು. ಕೃತಕ ಆಕ್ಸಿಜನ್ ನೀಡುವ ಮೂಲಕ ಉಸಿರಾಟ ನಡೆಸಲಾಗುತ್ತಿತ್ತು. ಇದೀಗ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿದ್ದು. ಯಶ್ ಸೇರಿ ಆರ್ಥಿಕ ನೆರವು ನೀಡಿದ ಎಲ್ಲಾರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.