ವಿಜಯಪುರ : ಎಸ್ಬಿಐ ಎಟಿಎಂ ನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ, ನಗರದ ಎಪಿಎಂಸಿ ಗೇಟ್ ಬಳಿ ನಡೆದಿದೆ.
ಕಳೆದ ತಡರಾತ್ರಿ ಕಳ್ಳರು ಎಂಟಿಎಂನಲ್ಲಿ ನುಗ್ಗಿ, ಎಟಿಎಂ ಒಡೆದಿದ್ದಾರೆ. ಇನ್ನು ಎಟಿಎಂನಲ್ಲಿ ಎಷ್ಟು ಹಣ ಕಳ್ಳತನ ಆಗಿದೆ ಎಂಬುದು ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ, ಘಟನಾ ಸ್ಥಳಕ್ಕೆ ಎಪಿಎಂಸಿ ಠಾಣೆಯ ಪಿಎಸ್ಐ ಜ್ಯೋತಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.