ಬೆಳಗಾವಿ: ಖ್ಯಾತ ನಿಜಗುಣಾನಂದ ಶ್ರೀಗಳಿಗೆ ಮತ್ತೆ ಬೆದರಿಕೆ ಪತ್ರ ಬಂದಿದೆ. ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪ ಶ್ರೀಗಳಾದ ನಿಜಾಗುಣಾನಂದ ಅವರಿಗೆ ಮತ್ತೆ ಪತ್ರಗಳು ಬಂದಿವೆ.
2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು 2023ರಲ್ಲಿ ತಪ್ಪಲ್ಲ, ನಿನ್ನ ಪಾಪದ ಕೊಡ ತುಂಬಿದೆ ಆದಷ್ಟು ಬೇಗ ನಿನ್ನ ತಿಥಿ, ನಿನ್ನ ಭಕ್ತರಿಗೆ ಹೇಳು. ನಮ್ಮ ಧರ್ಮದ ದೇವತೆಗಳನ್ನು ನಿಂದಿಸುವ ನಿನಗೆ ಘೋರ ಹತ್ಯೆಯೇ ಬರಲಿದೆ. ನಿನ್ನ ಅಂತಿಮ ದಿನಗಳು ಆರಂಭವಾಗಿವೆ, ಇನ್ನು ದಿನಗಳನ್ನ ಎಣಿಸು’ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.