ಕರ್ನಾಟಕ: ಮುಂಬರುವ ವರ್ಷ 2024ಕ್ಕೆ ಮುಂಜೂರಾದ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿದೆ. ಈ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತದೆ. ಮುಸ್ಲಿಂ ಸಮುದಾಯದ ಹಬ್ಬಗಳು ನಿಗದಿತ ದಿನಾಂಕದಂದು ಆಗದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನರಿಗೆ ದಿನ ಬದಲಾಯಿಸಬಹುದು.
ಮುಂಬರುವ ವರ್ಷ 2024ಕ್ಕೆ ಮುಂಜೂರಾದ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು (Public Holidays) ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿದಂತೆ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಹೀಗಿದೆ.
ಜನವರಿ 15, ಸೋಮವಾರ: ಉತ್ತರಾಯಣ ಪುಣ್ಯಕಾಲ, ಮಕರ ಸಕ್ರಾಂತಿ
ಜನವರಿ 26, ಶುಕ್ರವಾರ: ಗಣರಾಜ್ಯೋತ್ಸವ
ಮಾರ್ಚ್ 8, ಶುಕ್ರವಾರ: ಮಹಾ ಶಿವರಾತ್ರಿ
ಮಾರ್ಚ್ 29, ಶುಕ್ರವಾರ: ಗುಡ್ ಫ್ರೈಡೆ
ಏಪ್ರಿಲ್ 9, ಮಂಗಳವಾರ: ಯುಗಾದಿ ಹಬ್ಬ
ಏಪ್ರಿಲ್ 11, ಗುರುವಾರ: ಖುತುಬ್ ಎ ರಂಜಾನ್
ಮೇ 1, ಬುಧವಾರ: ಕಾರ್ಮಿಕರ ದಿನಾಚರಣೆ
ಮೇ 10, ಶುಕ್ರವಾರ: ಬಸವ ಜಯಂತಿ, ಅಕ್ಷಯ ತೃತೀಯ
ಜೂನ್ 17, ಸೋಮವಾರ: ಬಕ್ರೀದ್
ಜುಲೈ 17, ಬುಧವಾರ: ಮೊಹರಂ ಕಡೇ ದಿನ
ಆಗಸ್ಟ್ 15, ಗುರುವಾರ: ಸ್ವಾತಂತ್ರ್ಯ ದಿನಚಾರಣೆ
ಸೆಪ್ಟೆಂಬರ್ 7, ಶನಿವಾರ: ವರಸಿದ್ಧಿ ವಿನಾಯಕ ವೃತ
ಸೆಪ್ಟೆಂಬರ್ 16, ಸೋಮವಾರ: ಈದ್ ಮಿಲಾದ್
ಅಕ್ಟೋಬರ್ 2, ಬುಧವಾರ: ಗಾಂಧಿ ಜಯಂತಿ, ಮಹಾಲಯ ಅಮವಾಸ್ಯೆ
ಅಕ್ಟೋಬರ್ 11, ಶುಕ್ರವಾರ: ಮಹಾನವಮಿ, ಆಯುಧಪೂಜೆ
ಅಕ್ಟೋಬರ್ 17, ಗುರುವಾರ: ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 31, ಗುರುವಾರ: ನರಕ ಚತುರ್ದಶಿ
ನವೆಂಬರ್ 1, ಶುಕ್ರವಾರ: ಕನ್ನಡ ರಾಜ್ಯೋತ್ಸವ
ನವೆಂಬರ್ 2, ಶನಿವಾರ: ಬಲಿಪಾಡ್ಯಮಿ, ದೀಪವಾಳಿ
ನವೆಂಬರ್ 18. ಸೋಮವಾರ: ಕನಕದಾಸ ಜಯಂತಿ
ಡಿಸೆಂಬರ್ 25, ಬುಧವಾರ: ಕ್ರಿಸ್ಮಸ್
ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬಡುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ (ಏಪ್ರಿಲ್ 14) ಮತ್ತು ಮಹಾವೀರ ಜಯಂತಿ (ಏಪ್ರಿಲ್ 21) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (ಅಕ್ಟೋಬರ್ 12) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತದೆ. ಕಚೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಕಾ ಮುಖ್ಯಸ್ಥರು ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.