ಬೆಂಗಳೂರು : ರಾಜ್ಯದಲ್ಲಿ ನೂತನ ಉದ್ಯಮಗಳ ಸ್ಥಾಪನೆ : ಉದ್ಯೋಗ ಸೃಷ್ಟಿಗೆ ಒತ್ತು!
73ಯೋಜನೆಗಳು | ₹. 3,935 ಕೋಟಿಗೂ ಹೆಚ್ಚಿನ ಬಂಡವಾಳ | 14,500+ ಉದ್ಯೋಗಳ ಸೃಷ್ಟಿ
ಶುಕ್ರವಾರ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆನಡೆಸಿದ ಸಚಿವ ಎಂ ಬಿ ಪಾಟೀಲ್.
73 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು ₹ 3,935 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಸುಮಾರು 14,500 ಉದ್ಯೋಗಗಳು ಸೃಷ್ಟಿಯಾಗಲಿದೆ.
ETL ಸೆಕ್ಯೂರ್ ಸ್ಪೇಸ್ ಲಿ., DhaSH ಪಿ.ವಿ. ಟೆಕ್ನಾಲಜಿಸ್ , ಮೈಲಾರ್ ಇನ್ ಫ್ರಾ, ಸೇರಿದಂತೆ ಹಲವು ಕಂಪೆನಿಗಳು ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉದ್ಯಮಗಳು ಸ್ಥಾಪನೆಯಾಗಲಿದೆ.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಯವರಾದ ಡಾ. ಸೆಲ್ವಕುಮಾರ್, ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ, #KIADB ವ್ಯವಸ್ಥಾಪಕ ನಿರ್ದೇಶಕರಾದ ಡಾ. ಮಹೇಶ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.