ವಿಜಯಪುರ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಿಜಯಪುರ ಘಟಕದಿಂದ ನೂತನವಾಗಿ ವಿಜಯಪುರ-ಬೆಂಗಳೂರು ಎಸಿ ವೋಲ್ವೋ ಬಸ್ ಸೇವೆ ಆರಂಭಿಸಿದ್ದು, ನಿನ್ನೆದಿನ ಹಸಿರು ನಿಶಾನೆ ತೋರಿಸಿ ಸಂಚಾರಕ್ಕೆ ಚಾಲನೆ ನೀಡಿದ ಸಚಿವ ಎಂ ಬಿ ಪಾಟೀಲ್.
ಈ ಬಸ್ ಸುಂದರವಾಗಿರುವುದಷ್ಟೇ ಅಲ್ಲದೆ ಪ್ರಯಾಣವನ್ನು ಆರಾಮ ಮತ್ತು ಸುಖಕರವಾಗಿರಿಸಲಿದೆ. ಪ್ರತಿರಾತ್ರಿ ವಿಜಯಪುರ ಮತ್ತು ಬೆಂಗಳೂರಿನಿಂದ ಸಂಚರಿಸಲಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ರಮೇಶ ಜಿಗಜಿಣಗಿ, ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್, SP ಋಷಿಕೇಶ ಸೋನಾವಣೆ, DC ಟಿ. ಭೂಬಾಪಲನ್, ZP CEO ರೀಷಿ ಆನಂದ್, ಮೊದಲಾದವರು ಉಪಸ್ಥಿತರಿದ್ದರು.