ಗದಗ : ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿ ಸಹಾಯ ಮಾಡುವ ಮೂಲಕ ಸಚಿವ ಹಾಗೂ ಶಾಸಕ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.
ಗದಗನಗರದಿಂದ ಮುಂಡರಗಿಗೆ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಹೈತಾಪುರ ಗ್ರಾಮದ ಬಳಿ ಬೈಕ್ ಸವಾರ ತಿರುವಿನಲ್ಲಿ ಆಯತಪ್ಪಿ ಬಿದ್ದಿದ್ದಾನೆ. ಅದಕ್ಕಾಗಿ ತಕ್ಷಣವೇ ಗಾಯಾಳುವಿಗೆ ಸಚಿವ ಎಂಬಿ ಪಾಟೀಲ, ರೋಣ ಶಾಸಕ ಜಿ.ಎಸ್. ಪಾಟೀಲ ಉಪಚರಿಸಿ, ಸಿಬ್ಬಂದಿಯೊಂದಿಗೆ ವಾಹನದ ಮೂಲಕ ಗದಗ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟದ್ದಾರೆ. ಅಲ್ಲದೇ, ವೈದ್ಯರೊಂದಿಗೆ ಮಾತನಾಡಿ ಅಗತ್ಯದ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ..
ಸಚಿವ, ಶಾಸಕ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.