ರಾಯಚೂರು : ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ಅಂದ್ರೆ ಯಾವಾಗಲೂ ಹಿಂದೂ ವಿರೋಧಿ ಹಿನ್ನಲೆ ಇದೆ,ಆದ್ರೆ ನಾವು ಒಂದು ಮಾತು ಹೇಳುತ್ತೇನೆ.
ನಮ್ಮ ಹಬ್ಬ ಹರಿ ದಿನಗಳಮೇಲೆ ಯಾರು ಯಾವ ನಿರ್ಬಂಧ ಹಾಕಿದರೂ ನಾವು ಕೇಳುವುದಿಲ್ಲ. ನಾವು ವಿಜಯಪುರದಲ್ಲಿ ಡಿಜೆ ನೂ ಹಾಕುತ್ತೇವೆ. ರಾಮ ಮಂದಿರದ ಹಾಡು ಹಾಕ್ತೀವಿ. ಈಗಲ್ಲ ಹಿಂದಿನಿಂದಲೂ ನಾವು ಮಾಡಿಕೊಂಡು ಬಂದಿದ್ದೇವೆ ಎಂದು ಹೇಳಿದರು.
ಈಗಲೂ ನಾವು ಗಣಪತಿ ಕೂರಿಸಲು ಪೊಲೀಸ್ ಅನುಮತಿ ತೆಗೆದುಕೊಳ್ಳುವುದಿಲ್ಲ. ಎಷ್ಟು ಪ್ರಕರಣ ಹಾಕುತ್ತಾರೆ ಹಾಕಲಿ, ಅವರ ಪರ್ಮಿಷನ್ ನಾವ್ಯಾಕ್ರೀ ತಗೋಬೇಕು. ಗಣಪತಿ ಕೂಡಿಸೋದಕ್ಕೆ ಇದು ಹಿಂದೂಸ್ತಾನ ಐತಿ, ಪಾಕಿಸ್ತಾನಾ ಎಂದು ಕಿಡಿಕಾರಿದ್ದಾರೆ.
ಮತ್ತೆ ನಮ್ಮಿಂದಲೇ ಕೋಮು ಗಲಭೆ ಯಾಗ್ತಾವಾ.? ಅವರಿಂದ ಏನೂ ಆಗೋದಿಲ್ಲವಾ.? ಅವರು ಏನೇನೋ ಮಾಡ್ತಾರಲ್ಲ. ಪಾಕಿಸ್ತಾನ ಪರವಾಗಿ ಘೋಷಣೆ ಕೂಗ್ತಾರೆ. ಅವರ ಮೇಲೆ ಕ್ರಮ ಇಲ್ಲ. ನಾವು ವಿಜಯಪುರ ಸಿಟಿನ್ಯಾಗ ಯಾವ ಪೊಲೀಸ್ ಪರಮಿಷನ್ ಇಲ್ಲ, ಮೈಕ್ ಪರಮಿಷನ್ ಇಲ್ಲ ಎಂದು ಹೇಳಿದ್ದಾರೆ.
ನಾವು ಡಿಜೆನೂ ಹಾಕುತ್ತೇವೆ, ಕುಣಿಯುತ್ತೇವೆ. ನಮಗೆ ಹೆಂಗ್ ಹಬ್ಬ ಮಾಡಬೇಕೋ ಹಂಗ್ ಮಾಡ್ಕೊಳ್ತೇವೆ. ಅದೂ ನಮ್ಮ ಅಧಿಕಾರ ಐತಿ, ನಮಗೂ ಹಕ್ಕಿದೆ. ನಾವು ಮಾಡ್ತೇವೆ. ಅದಕ್ಕೆ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತದೆಯೂ ಮಾಡಿಲಿ, ಅದನ್ನ ಎದರಿಸಲು ನಾವು ಸಿದ್ದಿವಿದ್ದೇವೆ. ಕಾಂಗ್ರೆಸ್ ನವರು ಏನಾದ್ರೂ ಕಠಿಣ ಕಾನೂನು ತರುತ್ತೇವೆ ಎಂದ್ರೆ, ನೀವು ಎಲ್ಲಾ ಧರ್ಮದವರಿಗೂ ತನ್ನಿ. ಆಗ ನಾವು ಒಪ್ಪುತ್ತೇವೆ.. ಬರೀ ಹಿಂದೂಗಳಿಗಲ್ಲ. ನಮಗೇ ಮಾತ್ರ ತರ್ತೇವೆ ಅಂದ್ರೆ ನಾವು ಒಪ್ಪುವುದಿಲ್ಲ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.