ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಇಂದು ಯುಗಾದಿ ಪಾಡ್ಯ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಲಾಯಿತು. ಶ್ರೀ ಸಿದ್ದೇಶ್ವರ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಆತ್ಮೀಯರು ಭಾಗವಹಿಸಿದ್ದರು.
ಬಿಜೆಪಿ ಪಕ್ಷದಿಂದ ಉಚ್ಚಾಟನೆಗೆ ಒಳಗಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಜಯಪುರಕ್ಕೆ ಆಗಮಿಸಿದ್ದಾರೆ. ಯುಗಾದಿ ನಿಮಿತ್ತವಾಗಿ ಪತ್ನಿ ಶೈಲಜಾ ಇವರ ಜೊತೆಯಲ್ಲಿ ಹೋಮ ಹವನದಲ್ಲಿ ಭಾಗಿಯಾಗಿದ್ದರು. ಬಳಿಕ ಯಡಿಯೂರಪ್ಪ ಕುಟುಂಬದ ವಿರುದ್ಧ ಮತ್ತೆ ಯತ್ನಾಳ ಗುಡುಗಿದ್ದಾರೆ. ಹೊಸ ಪಕ್ಷ ಕಟ್ಟುವ ಕುರಿತು ಮಾತನಾಡಿದ್ದಾರೆ.
ವಿಜಯೇಂದ್ರ ಒಬ್ಬ ಮಹಾ ಭ್ರಷ್ಟ. ಇವನನ್ನು ನಮ್ಮ ಮೇಲೆ ಏಕೆ ಹೇರುತ್ತಿರಿ? ಇವನಿಂದಾಗಿ ಬಿಎಸ್ಟ್ ಜೈಲಿಗೆ ಹೋಗಬೇಕಾಯಿತು. ನಕಲಿ ಸಹಿ ಮಾಡಿದ ಆರೋಪ
ವಿಜಯೇಂದ್ರ ಮೇಲೆ ಇದೆ. 40% ಸೇರಿದಂತೆ ಸಾಕಷ್ಟು ಹಗರಣಗಳಲ್ಲಿ ವಿಜಯೇಂದ್ರ ಹೆಸರಿದೆ. ಹೀಗೆ ಹಗರಣ ಮಾಡಿರುವ ಒಂದು ಕುಟುಂಬವನ್ನ ಪಕ್ಷದಲ್ಲಿ ಮುಂದುವರೆಸುದಾದರೆ ಹಿಂದುತ್ವವಾದಿಗಳು ಹಿಂದೂ ಜನತೆ ಒಂದು ನಿರ್ಣಯ ಕೈಗೊಳ್ಳಬೇಕಾಗುತ್ತೆ. ಆ ಬಗ್ಗೆ ಇಂದಿನಿಂದಲೇ ಆ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸುತ್ತೇವೆ ಎಂದು ಹೇಳಿದರು.

