ಯತ್ನಾಳ ಆಡಿಯೋ ನನ್ನ ಬಳಿ ಇದೆಶಾಸಕ ಯತ್ನಾಳ ವಿರುದ್ಧ ಸಚಿವ ಎಂಬಿ ಪಾಟೀಲ್ ಕಿಡಿ.
ವಿಜಯಪುರದಲ್ಲಿ ಸಚಿವ ಎಂಬಿ ಪಾಟೀಲ್ ಹೇಳಿಕೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಹಾನಗರ ಪಾಲಿಕೆಯ ಕಮೀಷನರ್ ಲೋವರ್ ಕೆಡರ್ ಎಂದಿದ್ದಾರೆ.
ಶಾಸಕ ಯತ್ನಾಳ ಹಿಂದಿನ ಮನಪಾ ಆಯುಕ್ತ ಮೆಕ್ಕಳಕಿ ಅವರನ್ನು ಮುಂದುವರಿಸಬೇಕೆಂದು ಲೆಟರ್ ಕೊಟ್ಟಿದ್ದರು.
ಮೆಕ್ಕಳಕಿ ಹಾಗೂ ಈಗಿದ್ದವರು ಸೇಮ್ ಕೆಡರ್ ನವ್ರು
ಅವರಿಗೆ ಅರಿವು ಮರೆವು ಇರಬೇಕು.
ಮೆಕ್ಕಳಕಿ ಅವರನ್ನೆ ಮುಂದುವರಿಸಲು ಸಿಎಂಗೆ ಮನವಿ ಕೊಟ್ಟಿದ್ದರು.
ರಾಜ್ಯದ ಜನ ಸ್ಪಷ್ಟವಾಗಿ 136 ಸ್ಥಾನ ನೀಡಿದ್ದಾರೆ.
ಯಾರೋ ಹೇಳಿಕೆ ನೀಡಿದರೆ ಸರ್ಕಾರಕ್ಕೆ ಏನೂ ಆಗಲ್ಲ.
ಯತ್ನಾಳ ಅವರದ್ದು ಬಾಲಿಷ ಹೇಳಿಕೆ ಆಗಿದೆ.
ಯಡಿಯೂರಪ್ಪ ಅವರ ಮಗ 10 ಸಾವಿರ ಕೋಟಿ ಲೂಟಿ ಮಾಡಿದ್ದಾರೆ ಎಂದು ಈ ಹಿಂದೆಯೇ ಮಾತನಾಡಿದ್ದರು.
ಅವರದ್ದೇ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ.
ನನ್ನ ಬಳಿ ವಿಡಿಯೋ ಇದೆ
ಇದೆಲ್ಲ ಬಹಿರಂಗ ವಿಚಾರ..
ಹೀಗಾಗಿ ಕಾಂಗ್ರೆಸ್ ಮೇಲಿನ ಅವರ ಆರೋಪದಲ್ಲಿ ಹುರಳಿಲ್ಲ…