ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯಗೆ ಟಾಂಗ್ ನೀಡಿದ ಶಾಸಕ ಯತ್ನಾಳ..!
ಬೆಂಗಳೂರು : ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವರು ಪಕ್ಷ ಬಿಡುವುದಿಲ್ಲ, ಯಾಕೋ ಅವರಿಗೆ ಮನಸ್ಸಿಗೆ ಬೇಜಾರಾಗಿದೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಯತ್ನಾಳ್, ಒಳ್ಳೆ ದಿನ ಬರುತ್ತೆ ಗಡಿಬಿಡಿ ಯಾಕೆ?
ಜನ ರೆಸ್ಟ್ ಕೊಟ್ಟಿದ್ದಾರೆ. ಸ್ವಲ್ಪ ದಿನ ರೆಸ್ಟ್ ಮಾಡಲಿ ಎಂದು ಟಾಂಗ್ ನೀಡಿದ್ದಾರೆ.
ರೇಣುಕಾಚಾರ್ಯ ಲೋಕಸಭಾ ಟಿಕೆಟ್ ಕೇಳಿದ್ರಲ್ಲಿ ತಪ್ಪಿಲ್ಲ. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಅಲ್ಲಿನ ಎಂ.ಪಿ ನಿಲ್ಲಲ್ಲ ಅಂತಿದ್ದಾರೆ. ಹಾಗಾಗಿ ಟಿಕೆಟ್ ಕೇಳಿದ್ದಾರೆ. ಇದರಲ್ಲಿ ತಪ್ಪೇನಿದೆ? ಇನ್ನು ಉದಾಸಿಯವರೂ ಲೋಕಸಭೆಗೆ ಸ್ಪರ್ಧಿಸಲ್ಲ ಅಂದಿದ್ದಾರೆ. ಹಾಗಾಗಿ ಸಹಜವಾಗಿ ಟಿಕೆಟ್ ಕೇಳಿದ್ದಾರೆ ತಪ್ಪೇನು? ಎಂದು ಪ್ರಶ್ನಿಸಿದರು.
ಇನ್ನು ರಾಜ್ಯಾಧ್ಯಕ್ಷರು ಆದಷ್ಟು ಬೇಗ ಮುಕ್ತರಾಗಬೇಕು ಅಂತಿದ್ದಾರೆ. ಆದರೆ ಮೇಲಿನವರು ಅವರನ್ನು ಬಿಡುತ್ತಿಲ್ಲ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಪಾಪ ಅವರು ಒಳ್ಳೆ ಮನುಷ್ಯ… ಸೋತಾಗ ನೂರು ಮಂದಿ ಕಲ್ಲು ಹಾಕ್ತಾರೆ, ಅದೇ ಗೆದ್ದಿದ್ರೆ ಅವರನ್ನೇ ಮುಂದುವರೆಸ್ತಿದ್ರು ಎಂದು ಹೇಳಿದ್ದಾರೆ.