ಸಿದ್ದೇಶ್ವರ ಜಾತ್ರೆಯಲ್ಲಿ ಅನ್ಯ ಧರ್ಮದವರಿಗೆ ಕಟ್ಟೆಚ್ಚರ ಕೊಟ್ಟ ಶಾಸಕ ಯತ್ನಾಳ್
ವಿಜಯಪುರ ನಗರದಲ್ಲಿ ಶ್ರೀ ಸಿದ್ಧೇಶ್ವರ ಜಾತ್ರೆ ಪ್ರಯುಕ್ತ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರಿಕಾ ಗೋಷ್ಠಿ ಕರೆದು ಜಾತ್ರೆಯ ಶಿಸ್ತು ಬದ್ಧತೆಯ ಬಗ್ಗೆ ವಿವರವಾಗಿ ಹೇಳಿದರು ಹಾಗೂ ಶ್ರೀ ಸಿದ್ಧೇಶ್ವರ ಜಾತ್ರೆ ಐದು ದಿನಗಳ ವರೆಗೆ ನಡೆಯಲಿದ್ದು ಜಾತ್ರೆಯಲ್ಲಿ ಲಕ್ಷಾಂತರ ಜನಸಮೂಹವ ಸೇರುತ್ತದೆ, ಹಾಗೂ ಜಾತ್ರೆಗೆಂದೆ ಸುತ್ತಮುತ್ತಲಿನ ಊರಿನ ವ್ಯಾಪಾರಸ್ಥರು ಇಲ್ಲಿ ಬಂದು ವ್ಯಾಪಾರ ಮಾಡುತ್ತಾರೆ ಇದರಲ್ಲಿ ನಮ್ಮದೇನು ಆಕ್ಷೇಪವಿಲ್ಲ ಆದರೆ ನಮ್ಮ ಸನಾತನ ಹಿಂದೂ ಧರ್ಮ ದೊಡ್ಡದು ಈ ಧರ್ಮ ಕ್ಕೆ ಗೌರವ ಕೊಡುವವರು ಮಾತ್ರ ಜಾತ್ರೆಯಲ್ಲಿ ಅನುಮತಿ ಇದೆ . ಹಿಂದೂ ದೇವಸ್ಥಾನ ಜಾತ್ರೆ ಯಲ್ಲಿ ನೀವು ಗಳಿಸಿದ ಹಣ ದೇವರ ಪ್ರಸಾದ ಎಂದು ತಿಳಿವವರು ಮಾತ್ರ ಬನ್ನಿ ಅದು ನಿಮಗೆ ಹರಾಮ್ ಆಗಿದ್ದರೆ ನೀವು ಬರಬೇಡಿ.
ನಾವು ನಕಲಿ ಜಾತಾತೀತರಲ್ಲ ನಿಜವಾದ ಸನಾತನ ಧರ್ಮ ಹಿಂದೂಗಳು ನಾವು ಎಲ್ಲ ಜಾತಿಯರಿಗೂ ಗೌರವ ಕೊಡುತ್ತೇವೆ.
ಆದರೆ ನಮ್ಮ ಧರ್ಮಕ್ಕೆ ಗೌರವ ಕೊಟ್ಟರೆ ಮಾತ್ರ ನಾವು ಕೊಡುತ್ತೇವೆ ಎಂದು ಗಂಭೀರವಾಗಿ ಟೀಕಿಸಿದರು.