ನವದೆಹಲಿ : ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನ ಕರೆದಿದ್ದು, ಈ ಅಧಿವೇಶನವು ಸೆಪ್ಟೆಂಬರ್ 18 ರಿಂದ 22 ರವರೆಗೆ ನಡೆಯಲಿದೆ. ಈ ಅಧಿವೇಶನದಲ್ಲಿ ಐದು ಸಭೆಗಳು ನಡೆಯಲಿವೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಸಂಸತ್ತಿನ ಈ ವಿಶೇಷ ಅಧಿವೇಶನದಲ್ಲಿ, ಮೋದಿ ಸರ್ಕಾರವು ‘ಒಂದು ದೇಶ-ಒಂದು ಚುನಾವಣೆ’ ಕುರಿತು ಮಸೂದೆಯನ್ನ ತರಬಹುದು.
ದೇಶದಲ್ಲಿ ‘ಒಂದು ರಾಷ್ಟ್ರ-ಒಂದು ಚುನಾವಣೆ’ ಬಗ್ಗೆ ಚರ್ಚೆ ಬಹಳ ಸಮಯದಿಂದ ನಡೆಯುತ್ತಿದೆ. ಈ ವರ್ಷದ ಜನವರಿಯಲ್ಲಿ ಕಾನೂನು ಆಯೋಗವು ಈ ಬಗ್ಗೆ ರಾಜಕೀಯ ಪಕ್ಷಗಳಿಂದ ಆರು ಪ್ರಶ್ನೆಗಳಿಗೆ ಉತ್ತರಗಳನ್ನ ಕೋರಿತ್ತು. ಸರ್ಕಾರ ಇದನ್ನ ಜಾರಿಗೆ ತರಲು ಬಯಸಿದೆಯಾದ್ರು, ಅನೇಕ ರಾಜಕೀಯ ಪಕ್ಷಗಳು ಇದನ್ನ ವಿರೋಧಿಸುತ್ತಿವೆ…