ಭಾರತ: ಏಕದಿನ ವಿಶ್ವಕಪ್ನಲ್ಲಿ ಭಾರತೀಯರ ದಾಖಲೆಯ ಆಟ ಮುಂದುವರೆದಿದೆ, ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ನಿರ್ಮಿಸಿದ ಬಳಿಕ, ಮೊಹಮ್ಮದ್ ಶಮಿ ಬೌಲಿಂಗ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಮೊಹಮ್ಮದ್ ಶಮಿ ಏಕದಿನ ವಿಶ್ವಕಪ್ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. 17 ಇನ್ನಿಂಗ್ಸ್ಗಳಲ್ಲಿ ಮೊಹಮ್ಮದ್ ಶಮಿ 51 ವಿಕೆಟ್ ಪಡೆದು ಹೊಸ ದಾಖಲೆ ಬರೆದರು. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಶಮಿ ಮುರಿದರು, ಮಿಚೆಲ್ ಸ್ಟಾರ್ಕ್ ವಿಶ್ವಕಪ್ನಲ್ಲಿ 19 ಇನ್ನಿಂಗ್ಸ್ಗಳಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದ್ದರು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023 ರ ವಿಶ್ವಕಪ್ನ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕೇನ್ ವಿಲಿಯಮ್ಸ್ ಅವರ ವಿಕೆಟ್ ಪಡೆದಾಗ ಶಮಿ ಈ ಹೊಸ ದಾಖಲೆ ಬರೆದರು.
ಶಮಿ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ಗಳನ್ನು ಪಡೆದರು, ಈ ಮೂಲಕ ನ್ಯೂಜಿಲೆಂಡ್ ತಂಡವನ್ನು 327 ರನ್ಗಳಿಗೆ ಆಲೌಟ್ ಮಾಡಿದ ಭಾರತ 70 ರನ್ಗಳ ಗೆಲುವಿನೊಂದಿಗೆ 12 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಫೈನಲ್ ತಲುಪಿದೆ. ವಿಶ್ವಕಪ್ನಲ್ಲಿ ಅವರ ನಾಲ್ಕನೇ 5 ವಿಕೆಟ್ಗಳ ಸಾಧನೆಯೊಂದಿಗೆ, ಶಮಿ ವಿಶ್ವಕಪ್ನಲ್ಲಿ ಹೆಚ್ಚು ಐದು ವಿಕೆಟ್ಗಳನ್ನು ಗಳಿಸಿದ ಬೌಲರ್ ಆದರು.
ಶಮಿ 57 ರನ್ ನೀಡಿ 7 ವಿಕೆಟ್ ಪಡೆದಿದ್ದು ಯಾವುದೇ ಭಾರತೀಯ ಬೌಲರ್ನ ಅತ್ಯುತ್ತಮ ಏಕದಿನ ಬೌಲಿಂಗ್ ಅಂಕಿಅಂಶವಾಗಿದೆ. ಈ ಹಿಂದೆ ಭಾರತದ ಮಾಜಿ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ 2014ರಲ್ಲಿ ಬಾಂಗ್ಲಾದೇಶ ವಿರುದ್ಧ 4 ರನ್ ನೀಡಿ 6 ವಿಕೆಟ್ ಪಡೆದಿದ್ದು ಅತ್ಯುತ್ತಮ ಸಾಧನೆಯಾಗಿದ್ದು, ಶಮಿ ಆ ದಾಖಲೆಯನ್ನು ಮುರಿದರು. ಶಮಿ ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಮೂರು ಬಾರಿ ಐದು ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ದಾಖಲೆ ಕೂಡ ಬರೆದರು.
- ವಿಶ್ವಕಪ್ನಲ್ಲಿ 50 ವಿಕೆಟ್ ಪಡೆದ ಏಳನೇ ಬೌಲರ್
ಮೊಹಮ್ಮದ್ ಶಮಿ ಏಕದಿನ ವಿಶ್ವಕಪ್ನಲ್ಲಿ 50 ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿಶ್ವಕಪ್ ಇತಿಹಾಸದಲ್ಲಿ ಗ್ಲೆನ್ ಮೆಕ್ಗ್ರಾತ್, ಮುತ್ತಯ್ಯ ಮುರಳೀಧರನ್, ಮಿಚೆಲ್ ಸ್ಟಾರ್ಕ್, ಲಸಿತ್ ಮಾಲಿಂಗ, ವಾಸಿಮ್ ಅಕ್ರಮ್ ಮತ್ತು ಟ್ರೆಂಟ್ ಬೌಲ್ಟ್ ನಂತರ 50 ವಿಕೆಟ್ ಪಡೆದ ಏಳನೇ ಆಟಗಾರ ಎನ್ನುವ ಸಾಧನೆ ಮಾಡಿದರು. ಇದಕ್ಕೂ ಮುನ್ನ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರ 44 ವಿಕೆಟ್ಗಳ ಸಾಧನೆಯನ್ನು ಶಮಿ ಮುರಿದಿದ್ದರು.