ಮಹಾರಾಷ್ಟ್ರ: ಹಾಸಿಗೆಯ ಪೆಟ್ಟಿಗೆಯೊಳಗೆ ತಾಯಿ – ಮಗನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ನೀಲಿಮಾ ಗಣೇಶ್ ಕಾಪ್ಪೆ(45), ಅವರ ಮಗ ಮಗ ಆಯುಷ್ ಕಾಪ್ಪೆ(22) ಮೃತರು.
ಶುಕ್ರವಾರ ಈ ಘಟನೆ ನಡೆದಿದ್ದು,ಮೊದಲಿಗೆ ನೆರೆಹೊರೆ ಅವರಿಗೆ ಮನೆಯಿಂದ ದುರ್ವಾಸನೆ ಬಂದಿದೆ. ಆ ಬಳಿಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಕುಟುಂಬಸ್ಥರು ನಾಗುರದಿಂದ ಬಂದಿದ್ದಾರೆ. ಮನೆಗೆ ಬೀಗ ಹಾಕಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಈ ವೇಳೆ ಮುಂಭಾಗದ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿರುವುದು ಮತ್ತು ಹಿಂಬಾಗಿಲನ್ನು ಮುಚ್ಚಿರುವುದು ಕಂಡುಬಂದಿದೆ. ಪೊಲೀಸರು ಒಂದು ಬಾಗಿಲನ್ನು ಒಡೆದು ಮನೆಯೊಳಗೆ ಪ್ರವೇಶ ಮಾಡಿದ್ದು, ಕೋಣೆಯಲ್ಲಿ ರಕ್ತದ ಕಲೆಗಳನ್ನು ನೋಡಿದ್ದಾರೆ. ಹಾಸಿಗೆಯ ಪೆಟ್ಟಿಗೆಯನ್ನು ತೆರೆದು ನೋಡಿದ್ದಾರೆ. ಈ ವೇಳೆ ಅದರೊಳಗೆ ತಾಯಿ – ಮಗನ ಮೃತದೇಹವನ್ನು ನೋಡಿದ್ದಾರೆ.
ನೆರೆಹೊರೆಯವರ ಪ್ರಕಾರ, ಘಟನೆಯ ನಂತರ ಮಹಿಳೆಯ ಹಿರಿಯ ಮಗ ನಾಪತ್ತೆಯಾಗಿದ್ದಾನೆ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಹೇಳಲಾಗಿದೆ.
ಸದ್ಯ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.