ದಾವಣಗೆರೆ: 5 ವರ್ಷದ ಮಗಳನ್ನು ಸೊಂಟಕ್ಕೆ ಕಟ್ಟಿಕೊಂಡು ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಚನ್ನಗಿರಿ ತಾಲ್ಲೂಕಿನ ಹೊನ್ನೆಬಾಗಿ ಗ್ರಾಮದ ನಿವಾಸಿ ಮಂಜುನಾಥ್ ಪತ್ನಿ ಕವಿತಾ (27) ಹಾಗೂ ನಿಹಾರಿಕಾ (5) ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಬಳಿಯಿರುವ ಐತಿಹಾಸಿಕ ಪ್ರವಾಸಿ ತಾಣ ಸೂಳೆಕೆರೆಯಲ್ಲಿ ಈ ಘಟನೆ ನಡೆದಿದೆ.
ಕಳೆದ ಶುಕ್ರವಾರ ಮಗಳು ನಿಹಾರಿಕಾಳೊಂದಿಗೆ ಕವಿತಾ ಕಾಣೆಯಾಗಿದ್ದಳು. ಈ ಬಗ್ಗೆ ಪತಿ ಮಂಜುನಾಥ್ ಪೊಲೀಸರಿಗೆ ದೂರು ಕೊಟ್ಟಿದ್ದರು. ಸೋಮವಾರ ತಾಯಿ-ಮಗಳ ಶವ ಪತ್ತೆಯಾಗಿದೆ, ಸೂಳೆಕೆರೆ ಹಾರುವ ಮುನ್ನ ಮಗಳನ್ನು ವೇಲ್ನಿಂದ ಕಟ್ಟಿಕೊಂಡು ಕೆರೆಗೆ ಹಾರಿದ್ದಾರೆ.
ಮೂಲತಃ ಎರೇಹಳ್ಳಿಯ ನಿವಾಸಿಯಾದ ಕವಿತಾ ಅವರು 6 ವರ್ಷದ ಹಿಂದೆ ಮಂಜುನಾಥ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ವರದಕ್ಷಿಣೆ ಆರೋಪ ಕೇಳಿ ಬಂದಿತ್ತು.