ವಿಜಯಪುರ : ರಾಜ್ಯದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆ ಬಳಿಕ ಬಂದ್ ಆಗುತ್ತವೆ. ಕಾಂಗ್ರೆಸ್ ಆಡಳಿತ ಸಂಪೂರ್ಣ ಫೇಲ್ ಆಗುತ್ತೆ, ಈಗಾಗಲೇ ಫೇಲ್ ಆಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯಪುರ ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ನಿಂದ ಯಾವ ಅಭಿವೃದ್ಧಿ ಕೆಲಸವೂ ಆಗುತ್ತಿಲ್ಲ, ಎಲ್ಲವೂ ಪುಕ್ಸಟ್ಟೆ ಕೊಟ್ಟು ಕೊಟ್ಟು ಸರ್ಕಾರದಲ್ಲಿ ಹಣವೇ ಇಲ್ಲ, ಜನರಿಂದ ಕೋಟಿ ಕೋಟಿ ಹಣ ಕಸಿದುಕೊಂಡಿದ್ದಾರೆ. ಇದಕ್ಕಿಂತ ಹೆಚ್ಚಿಗೆ ಏನು ಬೈಯಬೇಕು ನಾವು? ಒಟ್ಟಾರೆ ಇವರು ಫೇಲ್ ಆಗುತ್ತಾರೆಂದು ಎಂದು ಹೇಳಿದರು.
ಕಾಂಗ್ರೆಸ್ನವರು ಇನ್ನೊಂದು ಭಾರೀ ಡೇಂಜರ್ ಕೆಲಸಮಾಡುತ್ತಿದ್ದಾರೆ, ಅದು ಇನ್ನೆರಡು ದಿನದಲ್ಲಿ ಬೆಂಗಳೂರಿನಿಂದ ಹೊರ ಬರಲಿದೆ, ಇವರೆಲ್ಲ ಪುಕ್ಸಟ್ಟೆ ಕೊಡುತ್ತಿರೋದೆಲ್ಲಾ ಪಾರ್ಲಿಮೆಂಟ್ ಚುನಾವಣೆವರೆಗೆ ಮಾತ್ರ, ಎಂಪಿ ಎಲೆಕ್ಷನ್ ಮುಗಿದ ಕೂಡಲೆ ಇವೆಲ್ಲ ಪುಕ್ಸಟ್ಟೆ ಸ್ಟೀಮ್ ಬಂದ್ ಮಾಡುತ್ತಾರೆ ಎಂದು ಹೇಳಿದರು.