ವಿಜಯಪುರ : ನಾನು ಒಂದು ಕೋಟಿ ರೂಪಾಯಿ ಕೇಳಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರ ವಿರುದ್ಧ ಜಿಗಜಿಣಗಿ ವಾಗ್ದಾಳಿ ನಡೆಸಿ,
ನಾನು ಒಂದು ಕೋಟಿ ಹಣ ಕೇಳಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನನಗೆ ಅವಳ ಹೆಸರು, ಊರು ಗೊತ್ತಿಲ್ಲ. ಟಿವಿಯಲ್ಲಿ ಬಂದಾಗ್ಲೇ ಚೈತ್ರಾ ಕುಂದಾಪುರ ಯಾರು ಎಂದು ಗೊತ್ತು ಆಗಿದೆ. ಒಬ್ಬ ವ್ಯಕ್ತಿಯ ಚಾರಿತ್ರೆ ಹರಣ ಮಾಡಲು ಇದೊಂದು ಸಾಧನೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹೆಚ್ಚು ಮಾಡದೇ ಹೋದ್ರೂ ಹಾಳು ಮಾಡಬಾರದು ಎಂದರು.