ವಿಜಯಪುರ: ಶಾಸಕ ಯತ್ನಾಳ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಜಯಪುರ ನಗರದಲ್ಲಿ ಮಾಧ್ಯಮದ ಮುಂದೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ,
ಶಿವಾಜಿ ಮಹಾರಾಜರು ಹಾಗೂ ಗಣೇಶನ ಬ್ಯಾನರ್ ಹರಿದು ಹಾಕಿದ್ದು ನೋವು ತಂದಿದೆ. ಈದ್ ಮಿಲಾದ್ ವೇಳೆ ಶಿವಾಜಿ ಸರ್ಕಲ್ನಲ್ಲಿ ಅಳವಡಿಸಿದ ಬ್ಯಾನರ್ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಇದನ್ನು ಪೊಲೀಸ ಇಲಾಖೆಯನವರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಮುಖಂಡ ಹಮ್ಮಿದ್ ಮುಶ್ರೀಫ್ ಕೈವಾಡ ಇದೆ ಎಂದು ಪರೋಕ್ಷವಾಗಿ ಆರೋಪಿಸಿದರು. ಸತತವಾಗಿ ಎರಡು ಸಲ ಸೋಲಿನ ಹತಾಶೆಕೊಂಡಿದ್ದಾರೆ. ಅಲ್ಲದೇ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಿಂದೂ ಮುಖಂಡರಿಗೆ ಹಣ ಹಂಚಿಕೆ ಮಾಡಿದ್ರೂ ಸೋಲು ಕಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.