ಬೀದರ್ : ಜಿಲ್ಲೆಯ ವಿಜಯನಗರ ತಾಂಡಾ ಗ್ರಾಮದಲ್ಲಿ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ರೈತರೊಬ್ಬರನ್ನು ಬಂಧಿಸಲಾಗಿದೆ.
ರೈತ ತೊಗರಿ ಬೆಳೆಯ ನಡುವೆ ಅಕ್ರಮವಾಗಿ ಗಾಂಜಾ ಗಿಡ ಬೆಳೆಸಿದ್ದರು. ಆರೋಪಿಯನ್ನು ಶಿವಾಜಿ ರಾಥೋಡ್ ಎಂದು ಗುರುತಿಸಲಾಗಿದ್ದು, ಈತ ಜಿಲ್ಲೆಯ ತೆಲಂಗಾಣದ ಗಡಿಯಲ್ಲಿ ಜಮೀನು ಹೊಂದಿದ್ದಾರೆ. ರಾಥೋಡ್ ಅವರ ಜಮೀನಿನಲ್ಲಿ 25.54 ಲಕ್ಷ ಮೌಲ್ಯದ 63.86 ಕೆಜಿ ತೂಕದ 179 ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಥೋಡ್ ತೊಗರಿ ಮತ್ತು ಹತ್ತಿ ಗಿಡಗಳ ಜೊತೆಗೆ ಗಾಂಜಾ ಗಿಡಗಳನ್ನು ಬೆಳೆಸಿದ್ದಾರೆ. ಈ ಕುರಿತು ಮೂಲಗಳಿಂದ ಖಚಿತ ಮಾಹಿತಿ ಪಡೆದ ಸಂತಪುರ ಪೊಲೀಸರು ಎಸ್ಪಿ ಚೆನ್ನಬಸವಣ್ಣ ಮಾರ್ಗದರ್ಶನದಲ್ಲಿ ಜಮೀನಿನ ಮೇಲೆ ದಾಳಿ ನಡೆಸಿದ್ದಾರೆ. ಈ ಕುರಿತು ಸಂತಪುರ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ರೈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.