ಬಾಗಲಕೋಟೆ: ಹಾಸ್ಟೆಲ್ ನಿಂದ ಕಾಣೆಯಾಗಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಅನುಮಾನಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬಾಗಲಕೋಟೆಯ ಶಿಗಿಕೇರಿ ಕ್ರಾಸ್ ನ ರೇಲ್ವೆ ಬ್ರಿಡ್ಜ್ ಬಳಿ ನಡೆದಿದೆ.
ಸುಮನ್ ಮನೋಹರ್ ಪತ್ತಾರ (22) ಸಾವನ್ನಪ್ಪಿರುವ ವಿದ್ಯಾರ್ಥಿನಿಯಾಗಿದ್ದು, ಮೃತ ಯುವತಿ ಇಳಕಲ್ ಮೂಲದ ನಿವಾಸಿಯಾಗಿದ್ದರು. ಮೃತ ವಿದ್ಯಾರ್ಥಿನಿ ಬಾಗಲಕೋಟೆ ಕುಮಾರೇಶ್ವರ್ ಮೆಡಿಕಲ್ ಕಾಲೇಜಿನಲ್ಲಿ ಫಿಜಿಯೋಥೆರಪಿಸ್ಟ್ 3ನೇ ವರ್ಷ ವ್ಯಾಸಂಗ ಮಾಡುತ್ತಿದ್ದಳು.
ಕಳೆದ ಎರಡು ದಿನದ ಹಿಂದೆ ಬೆಳಗ್ಗೆ ಹಾಸ್ಟೆಲ್ನಿಂದ ವಿದ್ಯಾರ್ಥಿನಿ ಕಾಣೆಯಾಗಿದ್ದಳು. ಹಾಸ್ಟೆಲ್ ನಿಂದ ಮಗಳು ಕಾಣೆಯಾಗಿದ್ದರ ಬಗ್ಗೆ ಯುವತಿಯ ಪೋಷಕರು ದೂರು ದಾಖಲಿಸಿದ್ದರು. ಇಂದು ಶಿಗಿಕೇರಿ ಕ್ರಾಸ್ನ ರೇಲ್ವೆ ಬ್ರಿಡ್ಜ್ ಬಳಿ ವಿದ್ಯಾರ್ಥಿನಿ ಶವ ಪತ್ತೆಯಾಗಿದ್ದು, ಬ್ರಿಡ್ಜ್ ಕಳಗೆ ಮುಳ್ಳುಕಂಟಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಬಾಗಲಕೋಟೆ ರೇಲ್ವೆ ಹಾಗೂ ಗ್ರಾಮೀಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.