ವಿಜಯಪುರ : ಸುಮಾರು ವರ್ಷಗಳಿಂದ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸಿಂದಗಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಇನ್ನು ಮಾಳಪ್ಪ ತಂದೆ ಭೀಮಣ್ಣ ಜಂಬಗಿ, ಆರೋಪಿಯಾಗಿದ್ದಾನೆ. ಸುಮಾರು 3 ವರ್ಷಗಳಿಂದ ಸಿಂದಗಿ ಮತ್ತು ಇಂಡಿ ಪಟ್ಟಣದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ. ನಿನ್ನೆ ಮಧ್ಯಾಹ್ನ ಸಿಂದಗಿ ನಗರದಲ್ಲಿ ಮೋರಟಗಿ ಬೈ ಪಾಸ್ ಹತ್ತಿರ ಅನುಮಾನಸ್ಪದವಾಗಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದಾಗ, ನಡು ರಸ್ತೆಯಲ್ಲಿ ತಡೆದು ವಿಚಾರಣೆ ನಡೆಸಿ, ಪೊಲೀಸ್ ಠಾಣೆಗೆ ತಂದು ತನಿಖೆ ಮಾಡಿದಾಗ ತಾನು ಬೈಕ್ ಕದಿಯುತ್ತಿರುವದು ಒಪ್ಪಿಕೊಂಡಿರುತ್ತಾನೆ.