ವಿಜಯಪುರ: ಚಲಿಸುತ್ತಿದ್ದ ಬಸ್ ನಿಂದ ಹೊರ ಬಿದ್ದ ವೃದ್ದೆಗೆ ಗಂಭೀರ ಗಾಯ, ಜಲನಗರ ಠಾಣೆಯ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ PSI ದೀಪಾ ವೃದ್ದೆಗೆ ಸಹಾಯಮಾಡಿ ಮಾನವೀಯತೆ ಮೆರದಿದ್ದಾರೆ. PSI ದೀಪಾ ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಲಿಸುತ್ತಿದ್ದ ಬಸ್ನಿಂದ ವೃದ್ಧೆ ಇಳಿಯುವಾಗ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ನಗರದ ಕೊಲ್ಹಾರ ರಸ್ತೆಯಲ್ಲಿ ನಡೆದಿದೆ. ತೊನಶ್ಯಾಳ ಗ್ರಾಮದ ಶಂಕ್ರಮ್ಮ ಬಿರಾದಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಚಲಿಸುತ್ತಿದ್ದ ಬಸ್ನಿಂದ ಶಂಕ್ರಮ್ಮ ಇಳಿಯುವಾಗ ಈ ಅವಘಡ ಸಂಭವಿಸಿದೆ. ಅಪಘಾತ ಪಕ್ಕದಲ್ಲಿದ್ದ ಜಲನಗರ ಪೊಲೀಸ ಠಾಣಾ ಪಿಎಸ್ಐ ದೀಪಾ, ವೃದ್ಧೆಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.