ಅನೇಕ ಕಾಯಿಲೆಗಳಿಗೆ ಪರಿಹಾರ : ಒಂದು ಲೋಟ ಬಿಸಿ ಹಾಲಿನಲ್ಲಿ ಒಂದು ಚಮಚ ತುಪ್ಪ ಹಾಕಿ ಕುಡಿದರೆ ಪರಿಣಾಮ ಸಿಗುತ್ತೆ..!
By9
Share
#image_title
SHARE
Health Tips : ತುಪ್ಪ ಮಿತವಾಗಿ ಸೇವನೆ ಮಾಡಿದ್ರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಡುಗೆಯಿಂದ ಹಿಡಿದು ಪ್ರತಿಯೊಂದು ತಿನಿಸುಗಳ ರುಚಿ ಹೆಚ್ಚಿಸಬಲ್ಲ ಆಹಾರ ಇದು. ತುಪ್ಪದಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ಹೇರಳವಾಗಿದೆ. ದೇಸಿ ತುಪ್ಪವನ್ನು ತಿನ್ನುವುದರಿಂದ ದೇಹದ ಊತ ಕಡಿಮೆಯಾಗುತ್ತದೆ.
#Milk and Ghee
ತುಪ್ಪ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಒಂದು ಲೋಟ ಬಿಸಿ ಬಿಸಿ ಹಾಲಿಗೆ ಒಂದು ಚಮಚ ತುಪ್ಪ ಬೆರೆಸಿ ಕುಡಿಯುವುದರಿಂದ ಇದರ ಲಾಭ ದುಪ್ಪಟ್ಟಾಗುತ್ತದೆ.
ಹಾಲಿನಲ್ಲಿರುವ ಕೊಬ್ಬಿನಲ್ಲಿ ಕರಗುವ ವಿಟಮಿನ್ಗಳನ್ನು (ಎ, ಡಿ, ಇ ಮತ್ತು ಕೆ) ಹೀರಿಕೊಳ್ಳಲು ತುಪ್ಪ ಬಹಳಷ್ಟು ಸಹಾಯ ಮಾಡುತ್ತದೆ. ಅದು ನಮ್ಮ ದೇಹಕ್ಕೆ ಒಳ್ಳೆಯದು. ತುಪ್ಪವು ಆರೋಗ್ಯಕರ ಕೊಬ್ಬನ್ನು ಹೊಂದಿದ್ದು ದಿನವಿಡೀ ದೇಹವನ್ನು ಶಕ್ತಿಯುತವಾಗಿರಿಸುತ್ತದೆ. ತುಪ್ಪ ಮತ್ತು ಹಾಲಿನ ಸಂಯೋಜನೆಯು ತುಂಬಾ ಒಳ್ಳೆಯದು. ಇದು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿಗೆ ಬಹಳ ಮುಖ್ಯವಾಗಿದೆ. ಮೂಳೆಯ ಆರೋಗ್ಯಕ್ಕೆ ಇದು ತುಂಬಾ ಪ್ರಯೋಜನಕಾರಿ.
ಕೀಲು ನೋವಿನಿಂದ ಪರಿಹಾರ ನೀಡುತ್ತದೆ. ತುಪ್ಪ ಹೊಟ್ಟೆಯ ಆಮ್ಲವನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಲಿನೊಂದಿಗೆ ತುಪ್ಪವನ್ನು ಬೆರೆಸಿ ಕುಡಿಯುವುದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಮೂಲಕ ತೂಕ ಕಡಿಮೆ ಮಾಡಿಕೊಳ್ಳಬಹುದು. ರಾತ್ರಿ ನಿದ್ದೆ ಸರಿಯಾಗಿ ಬರದೇ ಇದ್ದರೆ ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ತುಪ್ಪ ಹಾಕಿಕೊಂಡು ಕುಡಿಯಬೇಕು. ಇದರಿಂದ ನಿದ್ರೆ ಚೆನ್ನಾಗಿ ಬರುತ್ತದೆ.
ತುಪ್ಪ ತಿನ್ನಲು ಉತ್ತಮ ಸಮಯ ಯಾವುದು?
ರಾತ್ರಿ ಮಲಗುವ ಮುನ್ನ ಅಥವಾ ಮುಂಜಾನೆ ತುಪ್ಪದ ಹಾಲನ್ನು ಕುಡಿಯಬೇಕು. ತುಪ್ಪದ ಹಾಲು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮಲಗುವ ಮೊದಲು ರಾತ್ರಿ ಇದನ್ನು ಕುಡಿಯುವುದು ಪ್ರಯೋಜನಕಾರಿಯಾಗಿದೆ.