ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಆಕ್ಷನ್ ಸಿನಿಮಾಗಳಿಗೆ ಹೆಸರುವಾಸಿ. ಈಗಾಗಲೇ ಬಹಳಷ್ಟು ಸಾಹಸಪ್ರಧಾನ ಸಿನಿಮಾಗಳನ್ನು ಮಾಡಿರುವ ಸಲ್ಮಾನ್ ಮತ್ತೆ ಅದೇ ರೀತಿಯ ಸಿನಿಮಾ ಮೂಲಕ ಸದ್ಯದಲ್ಲೇ ಬರುತ್ತಿದ್ದಾರೆ. ಟೈಗರ್, ಟೈಗರ್ ಜಿಂದಾ ಹೈ, ವಾಂಟೆಡ್, ದಬಾಂಗ್, ಬಾಡಿ ಗಾರ್ಡ್, ಏಕ್ ಥಾ ಟೈಗರ್ ಮುಂತಾದ ಸಿನಿಮಾಗಳು ಭಾರೀ ಯಶಸ್ಸು ಪಡೆದಿರುವ ಹಿನ್ನೆಲೆಯಲ್ಲಿ ‘ಟೈಗರ್ 3’ ಚಿತ್ರದ ಬಿಡುಗಡೆ ಭಾರೀ ನಿರೀಕ್ಷೆ ಹುಟ್ಟಿಸಿದೆ.
ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಚಿತ್ರವು ದೀಪಾವಳಿಗೆ ಬಿಡುಗಡೆ ಆಗಲಿದೆ.
ನಟ ಸಲ್ಮಾನ್ ಖಾನ್ ಮುಂಬರುವ ಸಿನಿಮಾ ‘ಟೈಗರ್ 3’ ಗೆ ಭಾರೀ ನಿರೀಕ್ಷೆ ಎದುರಾಗಿದೆ. ಕಾರಣ, ಸಲ್ಲೂ ಅಭಿಮಾನಿಗಳು ತಮ್ಮ ನಟನ ಚಿತ್ರದ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ. ದೀಪಾವಳಿ ಹಬ್ಬದ ವೇಳೆ, 12 ನವೆಂಬರ್ 2023ರಂದು ಬಿಡುಗಡೆ ಆಗಲಿರುವ ಟೈಗರ್ 3 ಚಿತ್ರವು ಈಗಾಗಲೇ ಭಾರೀ ಹೈಪ್ ಪಡೆದಿದೆ. ಈ ಚಿತ್ರದಲ್ಲಿ ಮೈ ನವಿರೇಳಿಸುವ ಸಾಹಸಗಳಿದ್ದು, ಈ ಮೊದಲು ಬಂದಿದ್ದ ಟೈಗರ್ ಹಾಗೂ ಟೈಗರ್ 2 ಚಿತ್ರಕ್ಕಿಂತ ಭಾರೀ ಹೆಚ್ಚು ಎನ್ನುವಷ್ಟು ಈ ಚಿತ್ರದಲ್ಲಿ ಆಕ್ಷನ್ ಇದೆ ಎನ್ನಲಾಗಿದೆ.
ಸಲ್ಮಾನ್ ಖಾನ್ ಚಿತ್ರವು ಇತ್ತೀಚೆಗೆ ಬಿಡುಗಡೆಯನ್ನೇ ಕಂಡಿಲ್ಲ. ಬಿಗ್ ಬಜೆಟ್ ಹಾಗೂ ಭಾರೀ ಗ್ರಾಫಿಕ್ಸ್ ಹೊಂದಿರುವ ಟೈಗರ್ ಚಿತ್ರದ ಶೂಟಿಂಗ್ ಹಾಗೂ ಎಡಿಟಿಂಗ್ ಹೆಚ್ಚಿನ ವೇಳೆ ತೆಗೆದುಕೊಂಡಿದೆ. ಹೀಗಾಗಿ ಚಿತ್ರದ ಬಿಡುಗಡೆ ತುಂಬಾ ಲೇಟ್ ಎನ್ನುವಂತಾಗಿದೆ. ಈ ಚಿತ್ರವು ತುಂಬಾ ಗ್ರಾಂಡ್ ಮೇಕಿಂಗ್ ಹೊಂದಿದ್ದು, ಲೇಟ್ ಆದರೂ ಲೇಟೆಸ್ಟ್ ಆಗಿ ಮೂಡಿ ಬಂದಿದೆ ಎನ್ನಲಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಟೈಗರ್ 3 ಚಿತ್ರವು ಬಿಡುಗಡೆಯಾಗಲಿದೆ. ಸಿನಿಮಾ ಹೇಗಿದೆ, ಫಲಿತಾಂಶ ಏನು ಎಂಬುದು ತಿಳಿಯಲಿದೆ.
ಸಲ್ಮಾನ್ ಖಾನ್ ಅಭಿಮಾನಿಗಳು ಟೈಗರ್ 3 ಚಿತ್ರದ ಬಿಡುಗಡೆಯನ್ನು ತೀವ್ರ ನಿರೀಕ್ಷೆಯಿಟ್ಟು ಕಾಯುತ್ತಿದ್ದಾರೆ. ಕಾರಣ, ಬಿಡುಗಡೆ ಆಗಿರುವ ಈ ಚಿತ್ರದ ಟ್ರೈಲರ್ ವಿಭಿನ್ನವಾಗಿದ್ದು, ಸಲ್ಲೂ ಬಾಯಲ್ಲಿ ಬಂದಿರುವ ಡೈಲಾಗ್ಗಳು ಭಾರೀ ಹೈಲೈಟ್ ಆಗಿವೆ. ಕಾರಣ, ಈ ದೇಶದ ಬಗ್ಗೆ, ತನ್ನ ಬಗ್ಗೆ ವೈಯಕ್ತಿಕವಾಗಿ ನಟ ಸಲ್ಮಾನ್ ಖಾನ್ ಹೇಳಿರುವಂತಿದೆ ಸಂಭಾಷಣೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಿನಿಮಾ ಬಿಡುಗಡೆ ಬಳಿಕ ಸಲ್ಲೂ ಹೇಳಿರುವ ಡೈಲಾಗ್ಗಳು ಸಿನಿಮಾ ಪೂರಕವೇ ಅಲ್ಲವೇ ಎಂಬುದು ತಿಳಿದುಬರಲಿದೆ.