ಇಂಡಿಯಾ: ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ‘ಜವಾನ್’ ಸಿನಿಮಾ ಬಿಡುಗಡೆಗೆ ಇನ್ನು ಮೂವರು ದಿನಗಳು ಬಾಕಿಯಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ದಾಖಲೆ ಮಟ್ಟದಲ್ಲಿ ಟಿಕೆಟ್ ಮಾರಾಟವಾಗುತ್ತಿದೆ. ಜವಾನ್ ಕ್ರೇಜ್ ಹೇಗಿದೆ ಎಂದರೆ ಬರೋಬ್ಬರಿ ಆರು ಲಕ್ಷ ಟಿಕೆಟ್ಗಳು ಮಾರಾಟವಾಗಿವೆ.
ವರ್ಷದ ಮೊದಲ ಹಿಟ್ ಪಠಾಣ್ ನೀಡಿರುವ ಶಾರುಖ್ ಖಾನ್ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಹೀಗಾಗಿ ‘ಜವಾನ್’ ಅಬ್ಬರ ಕೂಡ ಜೋರಾಗಿಯೇ ಇದೆ. ತಮಿಳು ನಿರ್ದೇಶಕ ಅಟ್ಲಿ ಅವರ ಮೊದಲ ಹಿಂದಿ ಸಿನಿಮಾವಾಗಿದ್ದು, ಭರ್ಜರಿ ಟ್ರೈಲರ್ನೊಂದಿಗೆ ಒಳ್ಳೆ ಹೈಪ್ ಕ್ರಿಯೆಟ್ ಮಾಡಿದೆ.
ಜವಾನ್ ಚಿತ್ರದ ಸೆಪ್ಟಂಬರ್ 7ರಂದು ಬಿಡುಗಡೆಯಾಗಲಿದೆ. ಬಿಡುಗಡೆಗೆ ಏಳು ದಿನಗಳ ಮೊದಲು ಮುಂಗಡ ಬುಕ್ಕಿಂಗ್ ಓಪನ್ ಮಾಡಲಾಗಿದೆ. ಬೆಳ್ಳಿ ಪರದೆಯ ಮೇಲೆ ಜವಾನ್ ಕಣ್ತುಂಬಿಕೊಳ್ಳಲು ಇನ್ನೂ ಮೂರು ದಿನಗಳು ಬಾಕಿಯಿರುವಾಗ, ಈಗಾಗಲೇ 6 ಲಕ್ಷ ಟಿಕೆಟ್ಗಳು ಮಾರಾಟವಾಗಿವೆ.