ವಿಜಯಪುರ: ರಾಜ್ಯದಲ್ಲಿ ಬಿಜೆಪಿ ಮುಗಿದ ಆಧ್ಯಾಯ. ಮುಳುಗುವ ಹಡಗು ಎನ್ನುವುದು ಸಾಮಾನ್ಯ, ಆದರೆ ರಾಜ್ಯದ ಮಟ್ಟಿಗೆ ಬಿಜೆಪಿ ಮುಳಿಗಿರುವ ಹಡಗು. ವಿಪಕ್ಷದ ನಾಯಕನನ್ನು ನೇಮಿಸದಷ್ಟು ಆ ಪಕ್ಷದ ಪರಿಸ್ಥಿತಿ ದುರ್ಬಲವಾಗಿದೆ. ಕರ್ನಾಟಕ ರಾಜ್ಯದಲ್ಲಿನ ಸೋಲಿನಿಂದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಇನ್ನೂ ಚೇತರಿಕೊಂಡಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಕುಟುಕಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಟಿಕೆಟ್ ಕೊಡಿಸುವ ವಿಷಯದಲ್ಲಿ ಹಲವರಿಗೆ ಚೈತ್ರಾ ಕುಂದಾಪುರ ವಂಚನೆ ಮಾಡಿದ್ದು, ಶೇ.40ರಷ್ಟು ಕಮಿಷನ್ ಸರ್ಕಾರದ ಆಡಳಿತ ನೋಡಿದ್ದೇವೆ. ಕರ್ನಾಟಕದ ಮಟ್ಟಿಗೆ ಬಿಜೆಪಿ ಮುಳುಗಿವ ಹಡಗು.
ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಈ ಕಾರಣಕ್ಕೆ ರಾಜ್ಯದಲ್ಲಿ ಪಕ್ಷದ ಅಧ್ಯಕ್ಷನ ಬದಲಾವಣೆಗೂ ಮುಂದಾಗಿಲ್ಲ. ವಿಪಕ್ಷ ನಾಯಕನ ನೇಮಕವೂ ಮಾಡಲಾಗದ ದುಸ್ಥಿತಿ ಇದೆ. ಇದನ್ನು ನೋಡಿದರೆ ರಾಜ್ಯದಲ್ಲಿ ಬಿಜೆಪಿಯದ್ದು ಮುಗಿದ ಕಥೆ. ಕರ್ನಾಟಕದಲ್ಲಿ ಇನ್ನೆಂದೂ ಬಿಜೆಪಿ ತಲೆ ಎತ್ತಲು ಸಾಧ್ಯವಿಲ್ಲ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಂ ಎಂಬುದನ್ನು ಅ ಧಿಕೃತಗೊಳಿಸಿದೆ. ಈ ಮೈತ್ರಿಯಿಂದ ಜಾತ್ಯತೀತ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತಗಳ ಒಗ್ಗೂಡುವಿಕೆಗೆ ಸಹಕಾರಿ ಆಗಲಿದೆ ಎಂದರು.