ವಿಜಯಪುರ: ಬಬಲೇಶ್ವರ ತಾಲೂಕಿನ ಕೊಡಬಾಗಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸೌಹಾರ್ದ ಸಹಕಾರಿ ಸಂಘವನ್ನು ಉದ್ಘಾಟಿಸಿ ಶುಭಹಾರೈಸಿದ ಸಚಿವ ಎಂ ಬಿ ಪಾಟೀಲ್.
ಈ ಸಂಧರ್ಭದಲ್ಲಿ ಶ್ರೀ ಮ.ನಿ. ಪ್ರ. ಸ್ವ. ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ದಿಗಂಬರೇಶ್ವರ, ಸಂಸ್ಥಾನಮಠ, ಮರೆಗುದ್ಧಿ, ಮಮದಾಪುರದ ಪರಮ ಪೂಜ್ಯ ಶ್ರೀ ಅಭಿನವ ಮುರುಗೇಂದ್ರ ಮಹಾಸ್ವಾಮಿಗಳು, ಹಾಗೂ ಜಂಬಗಿ ಹಿರೇಮಠದ ಪರಮ ಪೂಜ್ಯ ಶ್ರೀ ಅಡವಿ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಬೀಳಗಿ ಶಾಸಕರಾದ ಜಿ.ಟಿ. ಪಾಟೀಲರು, ಸಂಸ್ಥೆಯ ನಿರ್ದೇಶಕರು, ಆಡಳಿತ ವರ್ಗ, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಇಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

