ವಿಜಯಪುರ: ಓರ್ವ ಯುವಕನನ್ನು ಹತ್ಯೆ ಮಾಡಿ, ಪೊಲೀಸ್ ಠಾಣೆಗೆ ಸರೆಂಡರ್ ಆದ ವ್ಯಕ್ತಿ.
ವಿಜಯಪುರ ನಗರದ ಹಕೀಮ್ ಚೌಕ್ ನಲ್ಲಿ ಯುವಕನ್ನು ಹಾಡುಹಗಲೇ ಚಾಕುವಿನಿಂದ ಚುಚ್ಚಿ ಬರ್ಬರ ಹತ್ಯೆಗೈದಿರುವ ಘಟನೆ ನಡೆದಿದೆ. ಹತ್ಯೆಯಾದ ಯುವಕನ್ನು ಆಯನ್ಸಲಾವುದ್ದೀನ ಶೇಕ್, ಮಹಾರಾಷ್ಟ್ರದ ಪುಣೆ ನಿವಾಸಿ ಎಂದು ಗುರುತಿಸಲಾಗಿದೆ. ಇನ್ನೂ ಹುಸೇನ್ಸಾಬ್ ನಂದಿಹಾಳ ವಿಜಯಪುರದ ನಿವಾಸಿ, ಹತ್ಯೆಗೈದಿರುವ ಆರೋಪಿಯಾಗಿದ್ದು. ಹತ್ಯೆಗೈದು ಆರೋಪಿ ನಗರದ ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಸರೆಂಡರ್ ಆಗಿದ್ದಾನೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.