ವಿಜಯಪುರ : ಗುಮ್ಮಟ ನಗರಿಯಲ್ಲಿ ದಿನಾಂಕ 10-12-2023, ರಂದು ರಾತ್ರಿ ಸಾಹಿಲ್ ಬಾಂಗಿ ಎಂಬ ಯುವಕನ ಬರ್ಬರ ಹತ್ಯೆ ಮಾಡಲಾಗಿತ್ತು.
ಇನ್ನೂ ಹತ್ಯೆ ಕುರಿತು ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಈ ಕುರಿತು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರೆ. ಸದರಿ ಕೊಲೆಯನ್ನು 5 ಜನರು ಸೇರಿ ಮಾಡಿರುವುದಾಗಿ ಬೆಳಕಿಗೆ ಬಂದಿದೆ,
1. ಸಮೀರ @ ಪಿ.ಕೆ ತಂ: ನಬಿಲಾಲ ಇನಾಮದಾರ, ವಯಾ-20 ವರ್ಷ, ಉದ್ಯೋಗ- ಕೂಲಿಕೆಲಸ, ಸಾ: ಹಳಕೇರಿ ಗಲ್ಲಿ, ಜೆ.ಎಂ.ರೋಡ, ವಿಜಯಪುರ.
2. ಮೊಹ್ಮದಖೈಫ್ ತಂ: ಮೊಹ್ಮದನಾಸೀರ ಮುಲ್ಲಾ, ವಯಾ-18 ವರ್ಷ 06 ತಿಂಗಳು, ಉದ್ಯೋಗ-ಕೂಲಿಕೆಲಸ, ಸಾ: ಹಳಕೇರಿ ಗಲ್ಲಿ, ಜೆ.ಎಂ.ರೋಡ, ವಿಜಯಪುರ.
3. ಬಿಲಾಲ ತಂ: ಮೊಹ್ಮದರಫೀಕ ಇನಾಮದಾರ, ವಯಾ-23 ವರ್ಷ, ಉದ್ಯೋಗ-ಮೆಕ್ಯಾನಿಕ, ಸಾ: ಜುಮ್ಮಾ ಮಸೀದಿ ಹತ್ತಿರ, ಜೆ.ಎಂ.ರೋಡ, ವಿಜಯಪುರ ಮತ್ತು
4. ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಇವರನ್ನು ಈಗಾಗಲೇ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
5. ತೌಫೀಕ ಇನಾಮದಾರ ಈತನು ಪರಾರಿ ಇದ್ದು ಆತನನ್ನು ಹುಡುಕಾಟ ನಡೆಸಲಾಗಿದೆ.
ಸದರಿ ಮೃತನಾದ ಸಾಹಿಲ ತಂ: ಹಾಫೀಜ್ ಹುಸೇನ್ ಭಾಂಗಿ ಮತ್ತು ಆರೋಪಿ-1 ನೇದವನು ಸೇರಿ ಆಗಾಗ ಮನೆ ಕಳ್ಳತನ ಮಾಡುತ್ತಿದ್ದು, ಸದರಿ ಕಳ್ಳತನದಿಂದ ಬಂದ ಹಣವನ್ನು ಹಂಚಿಕೊಳ್ಳುವ ವಿಷಯದಲ್ಲಿ ವೈಮನಸ್ಸು ಉಂಟಾಗಿ ಅವರಿಬ್ಬರ ನಡುವೆ ವೈಮನಸ್ಸು ಬೆಳೆದಿತ್ತು. ಅದೇ ರೀತಿ ಮೃತನು ಆರೋಪಿ-2 ಮೊಹ್ಮದಖೈಫ್ನ ತಂಗಿಗೆ ಕಾಡಿಸುತ್ತಿದ್ದು ಈ ವಿಷಯವಾಗಿ ಅವರಿಬ್ಬರ ನಡುವೆ ವೈಮನಸ್ಸು ಬೆಳೆದಿತ್ತು. ಮತ್ತು ಮೃತನು ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಆರೋಪಿ-3: ಬಿಲಾಲ ಇನಾಮದಾರ ಇವನು ಸಂಬಂಧಪಡದೇ ಇದ್ದರು ಸಹ ಅವನ ಹೆಸರನ್ನು ಪೊಲೀಸರ ಮುಂದೆ ಹೇಳುತ್ತಿದ್ದನು. ಇದರಿಂದಾಗಿ ಮೇಲ್ಕಂಡ ಎಲ್ಲ ಆರೋಪಿತರೆಲ್ಲರೂ ಸೇರಿ ಅವನಿಗೆ ಒಂದು ಗತಿ ಕಾಣಿಸೋಣ ಅಂತಾ ವಿಚಾರ ಮಾಡಿ ಚಾಕು, ಕಲ್ಲು ಮತ್ತು ಕಾರದ ಪುಡಿಯನ್ನು ಉಪಯೋಗಿಸಿ ದಿನಾಂಕ: 09.12.2023 ಹಾಗೂ ದಿನಾಂಕ: 10.12.2023ರ ರಾತ್ರಿ ವಿಜಯಪುರದ ಹಳಕೇರಿ ಓಣಿಯಲ್ಲಿ ಮೃತನನ್ನು ಕೊಲೆ ಮಾಡಿರುತ್ತಾರೆ.
ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೀಶಿಕೇಷ ಸೋನಾವಣೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.