ಹುಬ್ಬಳ್ಳಿ: ಈಗಿನ ಕಾಲದಲ್ಲಿ ಒಂದು ವಸ್ತು ಸಿಕ್ರೆ ಸಾಕು, ಕದ್ದು ಮುಚ್ಚಿ ಇಟ್ಟಕೊಳ್ಳೋರೆ ಹೆಚ್ಚು. ಅಂತದರಲ್ಲಿ ಇಲ್ಲೊಬ್ಬ ಆಟೋ ಚಾಲಕ ಪ್ರಯಾಣಿಕರು ಬಿಟ್ಟು ಹೋದ ಮೊಬೈಲ್ ನ್ನು ಪೊಲೀಸ್ ಠಾಣೆಗೆ ಹೋಗಿ ಒಪ್ಪಿಸಿ ಗ್ರಾಹಕರಿಗೆ ಮರಳಿಸಿ ಮಾನವೀಯತೆ ಸಾಕ್ಷಿಯಾಗಿದ್ದಾರೆ.
ಗಂಗಾಧರ ಇಂಡಿ ಎಂಬ ಆಟೋ ಚಾಲಕ ಹೊಸ ಬಸ್ ನಿಲ್ದಾಣದಿಂದ ಮಹಿಳಾ ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡು ಶಕ್ತಿ ನಗರಕ್ಕೆ ತಲುಪಿಸಿದ್ದಾರೆ. ಆ ಪ್ರಯಾಣಿಕರು ಆಟೋದಲ್ಲೆ ತಮ್ಮ ಮೊಬೈಲ್ನ್ನು ಬಿಟ್ಟು ಹೋಗಿದ್ದಾರೆ. ಆಟೋ ಚಾಲಕ ಗಂಗಾಧರ ಅವರು ಮನೆಗೆ ಹೋಗಿ ಆಟೋ ನೋಡಿದಾಗ ಮೊಬೈಲ್ ಕಂಡಿದೆ. ತಕ್ಷಣ ತಮ್ಮ ಆಟೋ ಚಾಲಕರ ಸಂಘದ ಅಧ್ಯಕ್ಷ ಹನಮಂತಪ್ಪ ಪವಾಡೆ, ಆಟೋ ಚಾಲಕರಾದ ರಾಜು ಕಾಲವಾಡ, ಅಮೀತ್ ಎಂಬುವವರ ಜೊತೆ ಗೋಕುಲ ರೋಡ್ ಪೊಲೀಸ್ ಠಾಣೆಗೆ ತೆರಳಿ, ಪೊಲೀಸರ ಸಮ್ಮುಖದಲ್ಲಿ ಆ ಪ್ರಯಾಣಿಕರನ್ನು ಕರೆಯಿಸಿ ಮೊಬೈಲ್ನ್ನು ಮರಳಿಸಿ ಮಾನವೀಯತೆಗೆ ಸಾಕ್ಷರತೆಯಾಗಿದ್ದಾರೆ. ಈ ಆಟೋ ಚಾಲಕರ ಕಾರ್ಯಕ್ಕೆ ಪೊಲೀಸರು ಮತ್ತು ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.