ವಿಜಯಪುರ : 2021 ರಲ್ಲಿ ವಿಜಯಪುರ ನಗರದ ಆಸರ ಗಲ್ಲಿಯಲ್ಲಿ, 9 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದ ಬಗ್ಗೆ, ಅಯ್ಯೂಬ್ ಅಬುಸೈಯದ್. ಮೋಮಿನ್ ಎಂಬ ಆರೋಪಿಯ ವಿರುದ್ದ ವಿಜಯಪುರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು, Pocso ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಈ ಪ್ರಕರಣದ ತನಿಖೆಗೆ ನಡೆಸಿ, ಸಾಕ್ಷಿ ಆಧಾರಗಳನ್ನು ನ್ಯಾಯಾಲಕ್ಕೆ ನೀಡಿದ್ದರು. ಸಾಕ್ಷಿ ಪುರಾವೆ ಆಧಾರದ ಮೇಲೆ ಆರೋಪಿಗೆ ವಿಜಯಪುರ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯದಲ್ಲಿ, ನ್ಯಾಯಾಧೀಶರಾದ ಶ್ರೀ ರಾಮ್ ನಾಯಕ್, ರವರು ಆರೋಪಿಗೆ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 20,000 ರೂಪಾಯಿ ದಂಡ ವಿಧಿಸಿದ್ದಾರೆ.