ವಿಜಯಪುರ: ಪಕ್ಕಾ ಉತ್ತರ ಕರ್ನಾಟಕ ಶೈಲಿಯಲ್ಲಿ ಮೂಡಿ ಬರಲಿರುವ, ಕ್ಯಾಚಿ ಟೈಟಲ್ ಒಂದಿಗೆ ಬಿಡುಗಡೆ ಯಾಗುತ್ತಿರುವ ಚಿತ್ರ ಸೈಕಲ್ ಸವಾರಿ.
ಚಲನಚಿತ್ರ ನವೆಂಬರ್ 3ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ನಟ, ನಿರ್ದೇಶಕ ದೇವು ಅಂಬಿಗ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳಿಯೊಂದರಲ್ಲಿ ನಡೆಯುವ ಪ್ರೇಮಕಥೆಯಲ್ಲಿ ನಾಯಕ ಹಳ್ಳಿ ಹಳ್ಳಿಗೆ ಸೈಕಲ್ ಸವಾರಿ ಮಾಡಿಕೊಂಡು ಬಾಂಬೆ ಮಿಠಾಯಿ ಮಾರಾಟ ಮಾಡುವ ಮಧ್ಯದಲ್ಲಿ ಹುಟ್ಟಿರುವ ಪ್ರೇಮಕಥೆಯೆ ಸೈಕಲ್ ಸವಾರಿ ಚಲನಚಿತ್ರದಲ್ಲಿ ಕಾಣಬಹುದು. ಈ ಚಲನಚಿತ್ರದಲ್ಲಿ ಒಟ್ಟು ಐದು ಗೀತೆಗಳಿವೆ. ಮರೆತು ಹೋಗಲು ಏನು ಕಾರಣ ಎನ್ನುವ ಚಿತ್ರ ಗೀತೆ ಹೃದಯಕ್ಕೆ ತಟ್ಟುವಂತಿದೆ. ಈ ಚಿತ್ರದಲ್ಲಿ ಕಾಮಿಡಿ, ಲವ್, ಥ್ರಿಲ್ಲರ್, ಸಸ್ಪೇನ್ಸ್ ಸೇರಿದಂತೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ನಿಂದ ಕೂಡಿದೆ ಎಂದರು.
ಇದೇ ಸಂದರ್ಭದಲ್ಲಿ ಮುದ್ದು ಬಂಗಾರ ಎಂಬ ಗೀತೆಯನ್ನು ಕೂಡ ಬಿಡುಗಡೆ ಮಾಡಿದರು.
ಈ ಚಿತ್ರದಲ್ಲಿ ವಿಜಯಪುರದ ನಟ, ನಟಿಯರು ಹಾಗೂ ತಂಡ ಕೆಲಸಮಾಡಿದ್ದಾರೆ.ಇದರಲ್ಲಿ ನಾಯಕ ನಾಗಿ ದೇವು ಅಂಬಿಗ, ನಟಿಯಾಗಿ ದೀಕ್ಷಾ ಭೀಸೆ. ಮುಖ್ಯ ಪಾತ್ರದಲ್ಲಿ ಕಾಣಿಸಕೊಳ್ಳಲಿದ್ದಾರೆ.